ಬೇಕಾಗುವ ಸಾಮಗ್ರಿಗಳು
ಮಾವಿನ ಹಣ್ಣಿನ ಪೇಸ್ಟ್-1 ಕಪ್
ರವೇ-1 ಕಪ್
ತುಪ್ಪ-ಅರ್ಧ ಕಪ್
ದ್ರಾಕ್ಷಿ,ಗೋಡಂಬಿ, ಬಾದಾಮಿ-10-12
ನೀರು-2 ಕಪ್
ಹಾಲು-ಮುಕ್ಕಾಲು ಕಪ್
ಸಕ್ಕರೆ-ಮುಕ್ಕಾಲು ಕಪ್
ಏಲಕ್ಕಿ ಪೌಡರ್-1/2 ಸ್ಪೂನ್
ಮಾಡುವ ವಿಧಾನ
ಪಾನ್ ಗೆ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ,ಗೋಡಂಬಿ ಬಾದಾಮ್ ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ.ನಂತರ ಪಾನ್ ಗೆ ತುಪ್ಪ ಹಾಕಿ ರವೇ ಹಾಕಿ ಹುರಿಯಿರಿ. ನಂತರ ಬೇರೆ ಪಾನ್ ಗೆ ೨ ಕಪ್ ನೀರು ಮುಕ್ಕಾಲು ಕಪ್ ಹಾಲು ಹಾಕಿ ಕುದಿಯುವಾವಗ ಹುರಿದ ರವೆಯನ್ನು ಗಂಟುಗಳು ಬಾರದ ರೀತಿ ಚೆನ್ನಾಗಿ ತಿರುಗಿಸಿ.ನಂತರ ಮುಚ್ಚಳ ಮುಚ್ಚಿ ೩ ನಿಮಿಷ ಬೇಯಿಸಿ.ನಂತರ ಸಿಹಿಯಾದ ಮಾವೀನ ಹಣ್ಣಿನ ಪೇಸ್ಟ್ ನ್ನು ಪಾನ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಮುಕ್ಕಾಲು ಕಪ್ ಸಕ್ಕರೆ,ಉಳಿದ ತುಪ್ಪ ದ್ರಾಕ್ಷಿ,ಗೋಡಂಬಿ ಹಾಕಿ ಮಿಕ್ಸ್ ಮಾಡಿ,ಸ್ವಲ್ಪ ಏಲಕ್ಕಿ ಪೌಡರ್ ಹಾಕಿದರೆ ರುಚಿಯಾದ ಮಾವಿನ ಹಣ್ಣಿನ ಶೀರ ರೆಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ