ಮಾವಿನಕಾಯಿ ರಸಂ/ಅಪ್ಪೆ ಸಾರು/RAW mango rasam/how to make rasam?


ಬೇಕಾಗುವ ಸಾಮಗ್ರಿಗಳು

ಮಾವಿನ ಕಾಯಿ-೧

ಕಾಯಿಮೆಣಸು-೨

ಕರಿ ಮೆಣಸಿನ ಪುಡಿ-೧ ಸ್ಪೂನ್

ಒಗ್ಗರಣೆಗೆ-ಸಾಸಿವೆ,ಉದ್ದು,ಬೇವಿನಸೊಪ್ಪು

ಇಂಗು-೧ ಚಿಟಿಕೆ

ಬೆಲ್ಲ -ಒಂದು ತುಂಡು

ಉಪ್ಪು-ರುಚಿಗೆ

ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು 


ಕುಕ್ಕರ್ನಲ್ಲಿ ೧ ಮಾವಿನಕಾಯಿ ಸ್ವಲ್ಪ ನೀರು ಹಾಕಿ ೨ ವಿಶೇಲ್ ಬರುವವರೆಗೂ ಬೇಯಿಸಿ.ಸ್ವಲ್ಪ ತಣ್ಣಗಾದ ನಂತರ ಸಿಪ್ಪೆ ತೆಗೆದು ಅದರ ಮಾವಿನ ಮಾಂಸವನ್ನು ಮಿಕ್ಸಿಗೆ ಹಾಕಿ ನುಣ್ಣನೆ ರುಬ್ಬಿ. ಒಂದು ಬಾಂಡ್ಲಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಒಗ್ಗರೆಣೆಗೆ ಸಾಸಿವೆ,ಉದ್ದು,ಬೇವಿನಸೊಪ್ಪು,ಕಾಯಿಮೆಣಸು ಹಾಕಿ ಪಟ ಪಟ ಸಿಡಿದ ನಂತರ ಅದಕ್ಕೆ ರುಬ್ಬಿದ ಮಾವಿನಕಾಯಿ ರಸ ಹಾಕಿ,ರಸಂ ಗೆ ಬೇಕಾದಷ್ಟು ನೀರು  ಸ್ವಲ್ಪ ೧ ಟಿ ಸ್ಪೂನ್ ಕಾಲು ಮೆಣಸಿನ ಪುಡಿ, ತುಂಡು ಬೆಲ್ಲ, ರುಚಿಗೆ ಉಪ್ಪು ಹಾಕಿ ಕುದಿಸಿ ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ.ಬಿಸಿಯಾದ ಖಡಕ್ ರಸಂ ಸವಿಯಲು ಸಿದ್ದ.

ಕಾಮೆಂಟ್‌ಗಳು