ಪರ್ಫೆಕ್ಟ್ ಮಂಗಳೂರ ಸ್ಟೈಲ್ ಗೋಳಿಬಜೆ/ mangalur golibaje

 


ಬೇಕಾಗುವ ಸಾಮಗ್ರಿಗಳು 

ಮೈದಾ ಹಿಟ್ಟು - ೧ 

ಕಪ್ ಮೊಸರು- ೧/೨ ಕಪ್ 

ಕಾಯಿಮೆಣಸು - ೩ 

ಬೇವಿನ ಸೊಪ್ಪು - ೨ ಎಸಳು 

ಜೀರಿಗೆ- ಸ್ವಲ್ಪ 

ಸಕ್ಕರೆ - ೧ 

ಚಮಚ ಶುಂಠಿ -ಸ್ವಲ್ಪ 

ಸೋಡಾ ಪುಡಿ- ೧/೨ ಚಮಚ.

 ಉಪ್ಪು - ರುಚಿಗೆ

 ಎಣ್ಣೆ- ಕರಿಯಲು

       

  ಒಂದು ಪಾತ್ರೆಗೆ ೧ ಕಪ್ ಮೈದಾ ಹಾಕಿ , ೧/೨ ಕಪ್ ಮೊಸರು ಹೆಚ್ಚಿದ ಕಾಯಿಮೆಣಸು ಶುಂಠಿ ಬೇವಿನಸೊಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಬರುವವರೆಗೂ ಚೆನ್ನಾಗಿ ಕಲೆಸಿ. ನಂತರ ಸ್ವಲ್ಪ ಜೀರಿಗೆ- ಸೋಡಾ ಪುಡಿ- ರುಚಿಗೆ ಉಪ್ಪು ಹಾಕಿ ೨ ಗಂಟೆಗಳ ಕಾಲ ಹಾಗೆ ಇಡೀ. ನಂತರ ಕರಿಯಲು ಬಾಣಲೆಯಲ್ಲಿ ಎಣ್ಣೆ- ಹಾಕಿ ಬಿಸಿಯಾದ ನಂತರ ಸ್ವಲ್ಪ ಸ್ವಲ್ಪ ಕಲೆಸಿದ ಹಿಟ್ಟು ಎಣ್ಣೆಗೆ ಬಿಡಿ ಸ್ವಲ್ಪ ಕೆಂಪಾದ ನಂತರ ಎಣ್ಣೆಯಿಂದ ತೆಗಿಯರಿ ಈಗ ಮಂಗಲೋರ್ ಪರ್ಫೆಕ್ಟ್ ಗೋಳಿಬಜೆ ಸವಿಯಲು ಸಿದ್ಧ 

ಕಾಮೆಂಟ್‌ಗಳು