ಉದುರಾದ ಟೊಮೇಟೊ ಮಸಾಲಾ ರೈಸ್


ಬೇಕಾಗುವ ಸಾಮಗ್ರಿಗಳು 

ಟೊಮೇಟೊ ೨-೩ 

ಈರುಳ್ಳಿ ೧ 

ಕೆಂಪು ಮೆಣಸು ೫ 

ಬೇಯಿಸಿದ ಅನ್ನ ೨ ಕಪ್ 

ಬೆಳ್ಳುಳ್ಳಿ- ೫-೬ ಎಸಳು 

ಶುಂಟಿ ಚಿಕ್ಕ ತುಂಡು 

ಜೀರಿಗೆ- ೧ ಚಮಚ 

ನೆಲಗಡಲೆ ಸ್ವಲ್ಪ 

ಎಣ್ಣೆ- ೩-೪ ಸ್ಪೂನ್ 

ಕೊತ್ತಂಬರಿಸೊಪ್ಪು ಸ್ವಲ್ಪ 

ಉಪ್ಪು ರುಚಿಗೆ 

ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಲು- ಇಡೀ ಅದಕ್ಕೆ ಇಡೀ ಟೊಮೇಟೊ ಕೆಂಪು ಮೆಣಸು ಹಾಕಿ ಬೆಂಧ ನಂತರ ಆರಲು ಬಿಡಿ. ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ಅದಕ್ಕೆ ಜೀರಿಗೆ- ಬೆಳ್ಳುಳ್ಳಿ- ಶುಂಟಿ ಹಾಕಿ ರುಬ್ಬಿ.

ನಂತರ ಒಂದು ಬಾಣಲೆಗೆ ಬಿಸಿ ಮಾಡಲು- ಇಟ್ಟು ಸ್ವಲ್ಪ ಎಣ್ಣೆ- ಹಾಕಿ ನೆಲಗಡಲೆ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ ನಂತರ ರುಬ್ಬಿದ ಟೊಮೇಟೊ ಮಸಾಲೆ ಹಾಕಿ ಹಸ್ಸಿ ವಾಸನೆ ಹೋಗುವ ವರೆಗೂ ಫ್ರೈ ಮಾಡಿ. ಅದಕ್ಕೆ ಬೇಯಿಸಿದ ರೈಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ಟೊಮೇಟೊ ಮಸಾಲಾ ರೈಸ್ ರೆಡಿ 

ಕಾಮೆಂಟ್‌ಗಳು