ಬೇಕಾಗುವ ಸಾಮಗ್ರಿಗಳು
ಕಡ್ಲೆ- ೧ ಕಪ್
ಬಟಾಟೆ- ೨-೩
ತೆಂಗಿನ ತುರಿ - ೧ ಕಪ್
ಕೆಂಪುಮೆಣಸು ೬-೭
ಬೇವಿನಸೊಪ್ಪು ೨ ಎಸಳು
ಕೊತ್ತಂಬರಿಬೀಜ ೧ ಚಮಚ
ಜೀರಿಗೆ- ೨ ಸ್ಪೂನ್
ತೆಂಗಿನ ಎಣ್ಣೆ ೨-೩ ಚಮಚ
ಹರಷಿಣ ಸ್ವಲ್ಪ
ಹುಳಿ ಸ್ವಲ್ಪ
ಈರುಳ್ಳಿ-೨
ಟೊಮೇಟೊ-೨
ಸಾಸಿವೆ ೧ ಚಮಚ
ಉದ್ದಿನ ಬೇಳೆ -೨ ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ
ಮಾಡುವ ವಿಧಾನ-
ಮೊದಲು ಕುಕ್ಕರ್ ಗೆ ನೀರು ಸ್ವಲ್ಪ ಉಪ್ಪು ಕಡಲೆ ಹಾಕಿ ೪ ವಿಶೇಲ್ ಬೇಯಿಸಿ. ಕಟ್ ಮಡಿದ ಬಟಾಟೆ- ಬೇಯಿಸಿ ಇಟ್ಟುಕೊಳ್ಳಿ. ಮಸಾಲೆಗೆ ಒಂದು ಬಾಣಲೆಗೆ ತೆಂಗಿನ ಎಣ್ಣೆ, ಕೊತ್ತಂಬರಿ ಬೀಜ, ಜೀರಿಗೆ- ಕೆಂಪು ಮೆಣಸು ಹಾಕಿ ಹುರಿಯಿರಿ. ೧ ಕಪ್ ತೆಂಗಿನ ತುರಿ ಅರಶಿನ ಎಲ್ಲವನ್ನು ಫ್ರೈ ಮಾಡಿ ಆರಿದ ನಂತರ ಮಿಕ್ಸಿ ಜಾರ್ ಗೆ ಹಾಕಿ ತರಿ ತರಿ ಯಾಗಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿ .ನಂತರ ಒಂದು ಬಾಣಲೆಗೆ ಒಗ್ಗರೆಣೆಗೆ ಸಾಸಿವೆ, ಉದ್ದಿನಬೇಳೆ ಬೇವಿನಸೊಪ್ಪು ಹಾಕಿ ಸಿಡಿಯುವವರೆಗೂ ಫ್ರೈ ಮಾಡಿ. ನಂತರ ಈರುಳ್ಳಿ ಟೊಮೇಟೊ ಹಾಕಿ ಸ್ವಲ್ಪ ಫ್ರೈ ಮಾಡಿ. ಈಗ ಬೇಯಿಸಿದ ಕಡ್ಲೆ ಮತ್ತು ಬಟಾಟೆ- ಹಾಕಿ ಮಿಕ್ಸ್ ಮಾಡಿ ಅದಕ್ಕೆ ರುಬ್ಬಿದ ಗಟ್ಟಿ ಮಸಾಲೆ ಹಾಕಿ ಸ್ವಲ್ಪ ನೀರು ರುಚಿಗೆ ಉಪ್ಪು ಹಾಕಿ ಬೇಯಿಸಿ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಚನ್ನ ಕಡ್ಲೆ ಸುಕ್ಕ ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ