ಬೇಕಾಗುವ ಸಾಮಗ್ರಿಗಳು
ಬಟಾಟೆ- ೩-೪
ಕಡ್ಲೆಹಿಟ್ಟು - ೧ ಕಪ್
ಕಾಯಿಮೆಣಸು- ೩-೪
ಲಿಂಬೆ ಹಣ್ಣು- ೧/೨ ಸ್ಪೂನ್
ಗರಂ ಮಸಾಲಾ-೧/೨ ಸ್ಪೂನ್
ಜೀರಿಗೆ- ಕಾಲು ಸ್ಪೂನ್
ಹರಷಿಣ - ೧/೨ ಸ್ಪೂನ್
ಕೊತ್ತಂಬರಿ ಸೊಪ್ಪು -೫೦ ಗ್ರಾಂ
ಕರಿಯಲು - ಎಣ್ಣೆ
ರುಚಿಗೆ ಉಪ್ಪು
ಒಗ್ಗರೆಣೆಗೆ
ಸಾಸಿವೆ ಉದ್ದಿನಬೇಳೆ ಕಾಯಿಮೆಣಸು
ಮಾಡುವ ವಿಧಾನ
ಕುಕ್ಕರ್ನಲ್ಲಿ ಸ್ವಲ್ಪ ನೀರು ಹಾಕಿ 3-4 ಬಟಾಟೆ- ಬೇಯಿಸಲು ಇಡಿ.2 ವಿಶೇಲ್ ಬಂದ ನಂತರ ತಣ್ಣಗಾಗಲು ಬಿಟ್ಟು ಸಿಪ್ಪೆ ತೆಗೆದು ಹಿಸುಕಿ plate ಅಲ್ಲಿ ಹಾಕಿ ಇಡಿ. ಒಂದು ಕಪ್ ಕಡ್ಲೆ ಹಿಟ್ಟಿಗೆ ಹಿಂಗು , ಜೀರಿಗೆ, ಉಪ್ಪು ಸ್ವಲ್ಪ ನೀರು ಹಾಕಿ ತೆಳ್ಳಗೆ ಕಲೆಸಿ ಇಡಿ.ಒಗ್ಗರೆಣೆಗೆ ಬಾಣಲೆ ಇಟ್ಟು 3-4 ಸ್ಪೂನ್ ಎಣ್ಣೆ- ಸಾಸಿವೆ ಉದ್ದಿನ ಬೇಳೆ ಹಾಕಿ ಅದು ಸಿಡಿಯುವಾಗ ಸ್ವಲ್ಪ ಹರಷಿಣ ಗರಮ್ ಮಸಾಲಾ ಸ್ವಲ್ಪ ಉಪ್ಪು ಹಾಕಿ ನಂತರ ಹಿಸುಕಿಟ್ಟ ಬಟಾಟೆ- ಹಾಕಿ ಮಿಕ್ಸ್ ಮಾಡಿ ಮೇಲೆ ಲಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಉಂಡೆಗಳಾಗಿ ಮಾಡಿ ಇಡೀ. ಈ ಉಂಡೆಗಳನ್ನು ಕಲಸಿದ ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ಬಟಟ ಅಂಬಡೆ ತಿನ್ನಲು ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ