ಬೇಕಾಗುವ ಸಾಮಗ್ರಿಗಳು
ಉದುರಾದ ಅನ್ನ -೨ ಕಪ್
ನೆಂಬೆ ಹಣ್ಣು - ೧ ಅಥವಾ ೨
ಈರುಳ್ಳಿ - ೧ ಅಥವಾ ೨
ಕೊತ್ತಂಬರಿ ಸೊಪ್ಪು - ಸ್ವಲ್ಪ
ಅರಶಿನ -ಸ್ವಲ್ಪ
ಒಗ್ಗರೆಣೆಗೆ
ಸಾಸಿವೆ- ೧ ಸ್ಪೂನ್
ಉದ್ದಿನ ಬೇಳೆ -೧ಸ್ಪೂನ್
ಬೇವಿನ ಸೊಪ್ಪು- ೧ ಅಥವಾ ೨ ಎಸಳು
ಹೆಚ್ಚಿದ ಕಾಯಿಮೆಣಸು -೩
ರುಚಿಗೆ ಉಪ್ಪು ಮಾಡುವ ವಿಧಾನ ಒಂದು ಬಾಣಲೆಗೆ ಬಿಸಿಯಾದ ನಂತರ ೨-೩ ಚಮಚ ಎಣ್ಣೆ- ಹಾಕಿ ಒಗ್ಗರೆಣೆಗೆ ಸಾಸಿವೆ , ಉದ್ದಿನಬೇಳೆ , ಕರಿ ಬೇವು , ಕಾಯಿಮೆಣಸು ಹಾಕಿ ಹುರಿದು ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ ನಂತರ ೧-೨ ಸಣ್ಣ ಚಮಚ ಹರಷಿಣ ಹಾಕಿ ಹುರಿಯಿರಿ. ಈಗ ರುಚಿಗೆ ತಕ್ಕಸ್ಟು ಉಪ್ಪು- ಹಾಕಿ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊನೆಗೆ ಲೈಮ್ ರಸ ಮಿಕ್ಸ್ ಮಾಡಿ . ರುಚಿಯಾದ ಲೆಮನ್ ರೈಸ್ ಸವಿಯಲು ಸಿದ್ಧ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ