ರುಚಿಯಾದ ವೆಜ್ ಫ್ರೈಡ್ ರೈಸ್


ಬೇಕಾಗುವ ಸಾಮಗ್ರಿ-

ಉದುರು ಉದುರು ಅನ್ನ ೨ ಕಪ್ 

ಕ್ಯಾರಟ್-1

ಬೀನ್ಸ್-3-4

ಈರುಳ್ಳಿ-1

ಸೋಯಾ ಸಾಸ್- 2 ಸ್ಮಾಲ್ ಸ್ಪೂನ್ 

ವಿನೆಗರ್- ಸ್ವಲ್ಪ 

ಟೊಮೇಟೊ-1

ಕೆಂಪು ಮೆಣಸು-4

ಬೆಳ್ಳುಳ್ಳಿ- 5-೬ ಎಸಳು 

ಶುಂಠಿ- ೧ ಸಣ್ಣ ತುಂಡು 

ಉಪ್ಪು- ರುಚಿಗೆ ತಕ್ಕಸ್ಟು 

ಕೊತ್ತಂಬರಿ ಸೊಪ್ಪು ಸ್ವಲ್ಪ 

Yenne 4 spoon 


ಮಾಡುವ ವಿಧಾನ - 

ಮೊದಲು ಟೊಮೇಟೊ ಕೆಂಪುಮೆಣಸು ನೀರು ಹಾಕಿ ಬೇಯಿಸಿ ತಣ್ಣಗಾದ ನಂತರ ಮಿಕ್ಸಿ ಜಾರ್ ಗೆ ಹಾಕಿ ಅದಕ್ಕೆ ಬೆಳ್ಳುಳ್ಳಿ- ಶುಂಠಿ ಹಾಕಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ. ನಂತರ ಬಾಣಲೆಗೆ ೪ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಸಣ್ಣಗೆ ಹಚ್ಚಿದ ಕ್ಯಾರಟ್ ಬೀನ್ಸ್ ಹಾಕಿ ಫ್ರೈ ಮಾಡಿ. ನಂತರ ರುಬ್ಬಿದ ಟೊಮೇಟೊ ಪೇಸ್ಟ್ ಹಾಕಿ ಫ್ರೈ ಮಾಡಿ ಅದಕ್ಕೆ ಸೋಯಾ ಸಾಸ್ ವಿನೆಗರ್ ರುಚಿಗೆ ಉಪ್ಪು ಹಾಕಿ ಫ್ರೈ ಮಾಡಿ ಕೊನೆಗೆ ಉದುರಾದ ಅನ್ನ ಹಾಕಿ ಚೆನ್ನಾಗಿ ಫ್ರೈ ಮಾಡಿ ಕೊನೆಗೆ ಕೊತ್ತಂಬರಿಸೊಪ್ಪು ಹಾಕಿದರೆ ರುಚಿಯಾದ ಉದುರು ಫ್ರೈಡ್ ರೈಸ್ ಸವಿಯಬಹುದು 

ಕಾಮೆಂಟ್‌ಗಳು