ಬೇಕಾಗುವ ಸಾಮಗ್ರಿಗಳು
ಕ್ಯಾಬೇಜ್-1 ಸಣ್ಣ ಸೈಜ್
ಟೊಮೇಟೊ-1-2
ಈರುಳ್ಳಿ-1-2
ಸಕ್ಕರೆ-2 ಸ್ಪೂನ್
ಮೈದಾ-1 ಕಪ್
ಕಾರ್ನ್ ಫ್ಲೋರ್- ೧/೨ ಕಪ್
ಬೆಳ್ಳುಳ್ಳಿ-4-5 ಎಸಳು
ಶುಂಟಿ- ಒಂದು ಸಣ್ಣ ತುಂಡು
ಕಾಯಿಮೆಣಸು-2
ಸೋಯಾ ಸಾಸ್-2 ಸ್ಪೂನ್
ಚಿಲ್ಲಿ ಪೌಡರ್-2 ಸ್ಪೂನ್
ಎಣ್ಣೆ- ಕರಿಯಲು
ಮಾಡುವ ವಿಧಾನ- ಮೊದಲು ಎಲೆ ಕೋಸು ಸಣ್ಣಗೆ ಹೆಚ್ಚಿಕೊಂಡು ಪಾತ್ರೆಗೆ ಹಾಕಿ. ಅದಕ್ಕೆ ೧ ಕಪ್ ಮೈದಾ,ಮುಕ್ಕಾಲು ಸಣ್ಣ ಕಪ್ ಕಾರ್ನ್ ಫ್ಲೋರ್ ಹಾಕಿ ಸ್ವಲ್ಪ ಖಾರದ ಹುಡಿ ಉಪ್ಪು ನೀರು ಹಾಕಿ ಗಟ್ಟಿಯಾಗಿ ಕಲೆಸಿ, ಉಂಡೆಗಳಾಗಿ ಎಣ್ಣೆಯಲ್ಲಿ ಕರೆದು ಇಟ್ಟುಕೊಳ್ಳಿ.ನಂತರ ಮಿಕ್ಸಿ ಜಾರ್ ಗೆ ಟೊಮೇಟೊ,ಶುಂಠಿ,ಬೆಳ್ಳುಳ್ಳಿ- ಸಕ್ಕರೆ ಹಾಕಿ ಸಾಸ್ ಮಾಡಿ. ಇನ್ನೊಂದು ಬಾಣಲೆಗೆ ೪-೫ ಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ ನಂತರ ಅದಕ್ಕೆ ೨ ಚಮಚ ಸೋಯಾ ಸಾಸ್ ಹಾಕಿ. ನಂತರ ರುಬ್ಬಿದ ಟೊಮೇಟೊ ಸಾಸ್ ಹಾಕಿ,ಸ್ವಲ್ಪ ನೀರು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಒಂದು ಕಪ್ ಗೆ ೧ ಚಮಚ ಕಾರ್ನ್ ಫ್ಲೋರ್,ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಬಾಣಲೆಗೆ ಹಾಕಿ( ದಪ್ಪ ಗ್ರೇವಿ ಯಾಗಲು ) ನಂತರ ಎಲೆಕೋಸು ಉಂಡೆಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಫ್ರೈ ಮಾಡಿ ಕೊತ್ತಂಬರಿಸೊಪ್ಪು ಉದುರಿಸಿದರೆ ರುಚಿಯಾದ ಎಲೆಕೋಸು ಮಂಚೂರಿ ರೆಡಿ
Nice good information
ಪ್ರತ್ಯುತ್ತರಅಳಿಸಿ