ಆರೋಗ್ಯಕರ ರುಚಿಯಾದ ಮಸಾಲಾ ಗಂಜಿ/masaale ganji


ಬೇಕಾಗುವ ಸಾಮಗ್ರಿಗಳು 

 ೨ ಕಪ್ ಬೇಯಿಸಿದ ಅನ್ನ 

ನೀರು-೪-೫ ಕಪ್ 

ಕಾಯಿಮೆಣಸು-೨ 

ಕೊತ್ತಂಬರಿಸೊಪ್ಪು- ೨೦ಗ್ರಾಮ್ 

ಉಪ್ಪು ರುಚಿಗೆ ತಕ್ಕಸ್ಟು. 

ಒಗ್ಗರೆಣೆಗೆ ಸಾಸಿವೆ- ೧ ಸ್ಪೂನ್

ಉದ್ದಿನ ಬೇಳೆ -೧ಸ್ಪೂನ್ 

ಕಡ್ಲೆ ಬೇಳೆ-೨ ಸ್ಪೂನ್ 

ಬೇವಿನ ಸೊಪ್ಪು-೨ ಎಸಳು

 ಶುಂಠಿ- ೧ ತುಂಡು

 ಬೆಳ್ಳುಳ್ಳಿ- ೫-೬ ಎಸಳು 

ಮಾಡುವ ವಿಧಾನ- ಕುಕ್ಕರ್ನಲ್ಲಿ ಬೇಯಿಸಿದ ಅನ್ನ ಹಾಕಿ ಅದಕ್ಕೆ ೪-೫ ಕಪ್ ನೀರು ರುಚಿಗೆ ಉಪ್ಪು ಹಾಕಿ ೩ ವಿಶೇಲ್ ಬೇಯಿಸಿ. ನಂತರ ಕಾಯಿಮೆಣಸು , ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿ ಇಡೀ. ಒಗ್ಗರೆಣೆಗೆ ಬಾಣಲೆ ಇಟ್ಟು ಅದಕ್ಕೆ ೩ ಚಮಚ ಎಣ್ಣೆ ಸಾಸಿವೆ ಉದ್ದಿನಬೇಳೆ ಕರಿಬೇವು ಜಜ್ಜಿದ ಶುಂಠಿ ಬೆಳ್ಳುಳಿ ಹಾಕಿ ಒಗ್ಗರಣೆಯನ್ನು ಬೇಯಿಸಿದ ಗಂಜಿಗೆ ಹಾಕಿ ಸ್ವಲ್ಪ ಕುಧಿಯಲು ಇಡೀ.ನಂತರ ಅದಕ್ಕೆ ಕೊತ್ತಂಬರಿಸೊಪ್ಪು ಕಾಯಿಮೆಣಸು ಹಾಕಿ ಸ್ವಲ್ಪ ಕುಧಿಸಿ. ಬೇಕಾದರೆ ಕಾಲು ಕಪ್ ಮೊಸರು ಹಾಕಬಹುದು. ಈಗ ರುಚಿಯಾದ ಮಸಾಲೆ ಗಂಜಿ ರೆಡಿ ಟು ಎಟ್ 


ಕಾಮೆಂಟ್‌ಗಳು