ಬೇಕಾಗುವ ಸಾಮಗ್ರಿಗಳು -
ಪನೀರ್ ೧೫೦ ಗ್ರಾಂ
ಹಸ್ಸಿ ಬಟಾಣಿ ಅರ್ಧ ಕಪ್
ಈರುಳ್ಳಿ- ೨
ಟೊಮೇಟೊ ೩
ಬೆಳ್ಳುಳ್ಳಿ- ೭-೮ ಎಸಳು
ಶುಂಠಿ- ೧ ಇಂಚು
ಕೆಂಪು ಮೆಣಸಿನ ಪುಡಿ ೨ ಚಮಚ
ದನಿಯಾ ಪುಡಿ ಅರ್ಧ ಚಮಚ
ಅರಶಿನ ಕಾಲು ಚಮಚ
ಗರಂ ಮಸಾಲಾ ಅರ್ಧ ಚಮಚ
ಜೀರಿಗೆ- ಅರ್ಧ
ಚಮಚ ಎಣ್ಣೆ ೩-೪ ಸ್ಪೂನ್
ಪಲಾವ್ ಎಲೆ ೧
ಕಾಯಿಮೆಣಸು ೨
ಮಾಡುವ ವಿಧಾನ-
ಸ್ಟೊವ್ ನಲ್ಲಿ ಪಾನ್ ಇಟ್ಟು ಅದಕ್ಕೆ ೪-೫ ಸ್ಪೂನ್ ಎಣ್ಣೆ ಹಾಕಿ.ಅದಕ್ಕೆ ಈರುಳ್ಳಿ ಟೊಮೇಟೊ , ಶುಂಠಿ ಬೆಳ್ಳುಳ್ಳಿ- ಕಾಯಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದನ್ನು ಮಿಕ್ಸಿ ಜಾರ್ ಗೆ ಹಾಕಿ ಸ್ಮೂತ್ ಪೇಸ್ಟ್ ಮಾಡಿ.ಬಾಣಲೆಗೆ ೩ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಏಲಕ್ಕಿ ಪಲಾವ್ ಎಲೆ ಜೀರಿಗೆ- ಹಾಕಿ ನಂತರ ಖಾರದ ಪುಡಿ ಹಾಕಿ ಫ್ರೈ ಮಾಡಿ. ಅದಕ್ಕೆ ರುಬ್ಬಿದ ಟೊಮೇಟೊ ಈರುಳ್ಳಿ ಪೇಸ್ಟ್ ಹಾಕಿ. ಸ್ವಲ್ಪ ನೀರು ಹಾಕಿ ದನಿಯಾ ಪುಡಿ ಅರಶಿನ ಹಾಕಿ ನಿದಾನ ಉರಿಯಲ್ಲಿ ೫ ನಿಮಿಷ ಬೇಯಿಸಿ. ನಂತರ ಹಸಿ ಬಟಾಣಿ ಪನೀರ್ ಕಟ್ ಮಾಡಿ ಹಾಕಿ. ಸ್ವಲ್ಪ ಬೇಯಿಸಿ ಅದಕ್ಕಿ ಗರಂ ಮಸಾಲಾ ರುಚಿಗೆ ಉಪ್ಪು ಹಾಕಿ ಮಿಕ್ಸ್ ಮಾಡಿ.೧/೨ ಕಪ್ ನೀರು ಹಾಕಿ ೫ ನಿಮಿಷ ನಿದಾನ ಉರಿಯಲ್ಲಿ ಬೇಯಿಸಿ ರುಚಿಗೆ ಉಪ್ಪು ಹಾಕಿದರೆ ಪನೀರ್ ಮಟರ್ ಗ್ರೇವಿ ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ