ತುಳುನಾಡಿನ ಬಸಳೆ ಗಸಿ/tasty Manglore basale gasi


ಬೇಕಾಗುವ ಸಾಮಗ್ರಿ  

ಬಸಳೆ-೨-೩ದಂಟು 

ಹೆಸರು ಬೇಳೆ - ೧/೨ ಕಪ್ 

ಟೊಮೇಟೊ-೧ 

ಈರುಳ್ಳಿ-೧  

ಮಸಾಲೆಗೆ - 

ಕೆಂಪು ಮೆಣಸು -೭ 

ಈರುಳ್ಳಿ-೧/೨ 

ಜೀರಿಗೆ-೧ ಸ್ಪೂನ್

ಕೊತ್ತಂಬರಿ ಬೀಜ- ೧ ೧/೨ ಕಪ್ 

ಬೆಳ್ಳುಳ್ಳಿ-೬ ಎಸಳು

 ಸಾಸಿವೆ-1spoon 

ತೆಂಗಿನ ತುರಿ - ೧ ಕಪ್

 ಹರಷಿಣ- ಸ್ವಲ್ಪ

 ಹುಳಿ- ಸ್ವಲ್ಪ

ಉಪ್ಪು ರುಚಿಗೆಮೊದಲು ಬಸಳೆ ಎಸಳು ತೆಗೆದು ನೀರಿನಲ್ಲಿ ಹಾಕಿ ತೊಳೆದುಕೊಳ್ಳಿ ಬಸಳೆಯನ್ನು ಸ್ವಲ್ಪ ಉದ್ದನೆ ಕಟ್ ಮಾಡಿಕೊಳ್ಳಿ. ಕಟ್ ಮಡಿದ ಬಸಳೆ ಕುಕ್ಕರ್ ಗೆ ಹಾಕಿ ಹೆಸರು ಬೇಳೆ  ಹಿಂಗು ೧ ಟೊಮೇಟೊ ೧ ಈರುಳ್ಳಿ ಹಾಕಿ ೧ ವಿಶೇಲ್ ಬೇಯಿಸಿ. ಮಸಾಲೆಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಮೆಣಸು ಜೀರಿಗೆ- ಕೊತ್ತಂಬರಿ ಇಂಗು ಬೆಳ್ಳುಳ್ಳಿ- ಈರುಳ್ಳಿ ಸಾಸಿವೆ ಹಾಕಿ ಹುರಿಯಿರಿ. ಮಸಾಲೆ ತಣ್ಣಗಾದ ನಂತರ ಮಿಕ್ಸಿ ಜಾರ್ ಗೆ ಸ್ವಲ್ಪ ನೀರು ತೆಂಗಿನ ತೂರಿ ಹರಷಿಣ ಹುಳಿ ಹಾಕಿ ನುಣ್ಣಗೆ ರುಬ್ಬಿ.ಈಗ ಕುಕ್ಕರ್  ಗೆ ಮಸಾಲೆ ಹಾಕಿ ಚೆನ್ನಾಗಿ ಕುಧಿಸಿ ರುಚಿಗೆ ಉಪ್ಪು ಹಾಕಿದರೆ ಬಸಳೆ ಗಸಿ ರೆಡಿ 





ಕಾಮೆಂಟ್‌ಗಳು