ಉಡುಪಿ ದೇವಸ್ಥಾನಗಳಲ್ಲಿ ಮಾಡುವ ಸಾಂಬಾರ್ ಸಖ್ಖತ್ತ್ ರುಚಿ/temple style sambar/ udupi devasthana dalli siguva taste huli


ಬೇಕಾಗುವ ಸಾಮಗ್ರಿಗಳು-  ಸಿಹಿ ಕುಂಬಳ -೧

 ಹರಷಿಣ ಸ್ವಲ್ಪ 

ಮೆಣಸಿನ ಪುಡಿ ಸ್ವಲ್ಪ  

ಮಸಾಲೆಗೆ

ತೆಂಗಿನ ಎಣ್ಣೆ- ೫ ಸ್ಪೂನ್  

ಕೆಂಪು ಮೆಣಸು-೭-೮ 

ಉದ್ದಿನ ಬೇಳೆ -೧ ಸ್ಪೂನ್ಮೆಂತೆ- ಸ್ವಲ್ಪ 

ಕೊತ್ತಂಬರಿ ಬೀಜ- ೬ ಸ್ಪೂನ್ 

ಹಿಂಗ್- ಸ್ವಲ್ಪ 

ತುರಿದ ತೆಂಗಿನಕಾಯಿ- ೧ ಕಪ್ 

ಬೇಯಿಸಿದ ತೊಗರಿ ಬೇಳೆ - ೧ ಕಪ್ 

ರುಚಿಗೆ- ಉಪ್ಪು ಬೆಲ್ಲ ಹುಳಿ 

 ಒಗ್ಗರೆಣೆಗೆ- ಸಾಸಿವೆ ,ಮೆಣಸು, ಬೇವಿನಸೊಪ್ಪು 

ಮಾಡುವ ವಿಧಾನ ಸ್ವಲ್ಪ ದೊಡ್ಡ ಹೋಳುಗಳಾಗಿ ಕಟ್ ಮಾಡ್ಕೊಂಡು ಸಿಹಿ ಕುಂಬಳ ಕಾಯಿಯನ್ನು ಪಾತ್ರೆಯಲ್ಲಿ ನೀರು ಹಾಕಿ ಬೇಯಲು ಇಡೀ ಅದಕ್ಕೆ ರುಚಿಗೆ ಉಪ್ಪು ಬೆಲ್ಲ ಹುಳಿ ಹರಷಿಣ ಸೇರಿಸಿ ಬೇಯಿಸಿ. ಕುಕ್ಕರ್ನಲ್ಲಿ ೧ ಕಪ್ ತೊಗರಿ ಬೇಳೆ ಬೇಯಿಸಿಟ್ಟುಕ್ಕೊಳ್ಳಿ. ನಂತರ ಮಸಾಲೆಗೆ ಒಂದು ಬಾಣಲೆ ಇಟ್ಟು ಅದಕ್ಕೆ ತೆಂಗಿನ ಎಣ್ಣೆ ಹಾಕಿ ಕೆಂಪು ಮೆಣಸು ಹುರಿಯಿರಿ ನಂತರ ತೆಗೆದು ಬಾಣಲೆಗೆ ಕೊತ್ತಂಬರಿ ಬೀಜ ಹಿಂಗು ಜೀರಿಗೆ- ಮೆಂತೆ ಹಾಕಿ ಚೆನ್ನಾಗಿ ಹುರಿಯಿರಿ ಕೊನೆಗೆ ಸ್ವಲ್ಪ ಬೇವಿನಸೊಪ್ಪು ಹಾಕಿ ಹುರಿದಿರುವ ಮಸಾಲೆಯನ್ನು ೧ ಕಪ್ ತೆಂಗಿನ ತುರಿಯೊಂದಿಗೆ ನುಣ್ಣಗೆ ರುಬ್ಬಿ.ರುಬ್ಬಿದ ಮಸಾಲೆ ತೆಗೆದು ಬೇಯಿಸಿದ ಸಿಹಿ ಕುಂಬಳ ಪಾತ್ರೆಗೆ ಸೇರಿಸಿ. ನಂತರ ಬೇಯಿಸಿದ ತೊಗರಿ ಬೇಳೆ ಹಾಕಿ ಕುಧಿಸಿ ಒಗ್ಗರೆಣೆ ಕೊಟ್ಟರೆ ದೇವಸ್ಥಾನದ ಹುಳಿ ಅನ್ನದ ಜೊತೆ ಸವಿಯಲು ರೆಡಿ 

ಕಾಮೆಂಟ್‌ಗಳು