ತುಳುನಾಡ ರುಚಿಯಾದ ಸ್ಪೆಷಲ್ ತಿಂಡಿ ಪುಂಡಿ ಗಸಿ/ tulunaada special pundi gasi

ಬೇಕಾಗುವ ಸಾಮಗ್ರಿಗಳು 

ಬೆಳ್ತಿಗೆೆ ಅಕ್ಕಿ-೧/೨ ಕೆಜಿ (೪ ಗಂಟೆಗಳ ಕಾಲ ನೆನಿಸಿದಬೇಕು)

ಗಸಿ ಮಾಡಲು-

ಎಣ್ಣೆ-೩ ಸ್ಪೂನ್ 

ಕೊತ್ತಂಬರಿ ಬೀಜ- ೧ ಸ್ಪೂನ್ 

ಜೀರಿಗೆ- ೧/೨ ಸ್ಪೂನ್ 

ಮೆಣಸು- 5-6

ಮೆಂತೆ- ಸ್ವಲ್ಪ 

ಬೇವಿನ ಸೊಪ್ಪು- ೧ ಎಸಳು 

ತೆಂಗಿನ ತುರಿ- ೧ ಕಪ್ 

ಈರುಳ್ಳಿ- ೧ 

ಹರಷಿಣ ಹುಳಿ - ಸ್ವಲ್ಪ 

ಒಗ್ಗರೆಣೆಗೆ- ಸಾಸಿವೆ- ಬೇವಿನಸೊಪ್ಪು 

ರುಚಿಗೆ ತಕ್ಕಸ್ಟು ಉಪ್ಪು- ಹಾಕಿ 

4-5 ಗಂಟೆ ನೆನೆಸಿದ ಅಕ್ಕಿಯನ್ನು ಮಿಕ್ಸಿ ಜಾರ್ ಗೆ ಹಾಕಿ ತರಿಯಾಗಿ ರುಬ್ಬಿ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ- ಹಾಕಿ ರುಬ್ಬಿದ ಬಂದ ಗಟ್ಟಿ ಮಾಡಲು- ಬಾಣಲೆಗೆ ಹಾಕಿ ಕಾದಾಡಿಸಿ ಸ್ವಲ್ಪ ಗಟ್ಟಿಯಾಗಿ ಆರುತ್ತಿರುವಾಗಲೇ ಪುಂಡಿ ಮಾಡಲು- ಉಂಡೆ ಕಟ್ಟಿ ಬೇಯಿಸಲು ಇಡೀ. (೨೫ ನಿಮಿಷ ಬೇಯಿಸಬೇಕು)  

ನಂತರ ಮಸಾಲೆಗೆ ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಕೊತ್ತಂಬರಿ ಜೀರಿಗೆ- ಮೆಂತೆ ೫-೬ ಮೆಣಸು ಬೇವಿನ ಸೊಪ್ಪು ಹಾಕಿ ಹುರಿಯಿರಿ. ಹುರಿದ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಅದಕ್ಕೆ ತುರಿದ ೧ ಕಪ್ ತೆಂಗು ಸ್ವಲ್ಪ ಅರಶಿನ ಹುಳಿ ಸ್ವಲ್ಪ ನೀರು ಹಾಕಿ ರುಬ್ಬಿ. ನಂತರ ಒಂದು ಬಾಣಲೆಗೆ ಎಣ್ಣೆ ಸಾಸಿವೆ ಈರುಳ್ಳಿ ಹಾಕಿ ಫ್ರೈ ಮಾಡಿ ಅದಕ್ಕೆ ಮಸಾಲೆ ೧-೨ ಕಪ್ ನೀರು ಹಾಕಿ ಕುದಿಸಿ. ಕುದಿಯುತ್ತಿರುವಾಗಲೇ ಬೇಯಿಸಿದ ಪುಂಡಿಗಳನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಬೇಯಿಸಿದರೆ  ರುಚಿಗೆ ತಕ್ಕಸ್ಟು ಉಪ್ಪು- ಹಾಕಿ ಸ್ಪೆಷಲ್ ಪುಂಡಿ ಗಸಿ ರೆಡ್ಯಾಗುತ್ತದೆ 

ಕಾಮೆಂಟ್‌ಗಳು