ಆರೋಗ್ಯಕರ ಬಾಳೆ ದಿಂಡಿನ ಪಲ್ಯ /Baale dindina palya/healthy and tasty


ಬೇಕಾಗುವ ಸಾಮಗ್ರಿಗಳು 

ಬಾಳೆ ದಿಂಡು-೧(ಸಣ್ಣಗೆ ಹೆಚ್ಚಿಕೊಳ್ಳಿ) 

ತೆಂಗಿನ ತುರಿ-೧ ಕಪ್ 

ಕಾಯಿಮೆಣಸು-೨ 

ಬೆಲ್ಲ-ಸ್ವಲ್ಪ 

ಒಗ್ಗರೆಣೆಗೆ ಸಾಸಿವೆ- ಉದ್ದಿನ ಬೆಲೆ ಕರಿಬೇವು 

ರುಚಿಗೆೆ ಉಪ್ಪು 

ಮೊಸರು-೩ ಸ್ಪೂನ್.

ಮಾಡುವ ವಿಧಾನ ಮೊದಲು ಬಾಳೆ ದಿಂಡನ್ನು ಸಣ್ಣಗೆ ಹಚ್ಚಿ 3 ಚಮಚ ಮೊಸರು ಹಾಕಿ ನೆನೆಸಿಡಿ. ನಂತರ ಬಾಣಲೆ  ಎಣ್ಣೆ ಹಾಕಿ ಒಗ್ಗರೆಣೆಗೆ ಸಾಸಿವೆ- ಉದ್ದಿನ ಬೇಳೆ ಕರಿಬೇವು ಹಾಕಿ. ಹೆಚ್ಚಿದ ಹಸಿಮೆಣಸು ಹಾಕಿ ನಂತರ ಬಾಳೆದಿಂಡು ಹಾಕಿ ಬೇಯಿಸಿ. ನಂತರ ಬೆಲ್ಲ ತೆಂಗಿನ ತುರಿ ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆರೋಗ್ಯಕರ ಪಲ್ಯ ರೆಡಿ 

ಕಾಮೆಂಟ್‌ಗಳು