ಬೇಕಾಗುವ ಸಾಮಗ್ರಿಗಳು
ಉದುರಾದ ರೈಸ್ -೩ ಕಪ್
ತರಕಾರಿಗಳು-ಬಟಾಣಿ- ೧/೨
ಕಪ್ ಕ್ಯಾರಟ್ -೧-೨
ಬೀನ್ಸ್-೧೪-೧೬
ಈರುಳ್ಳಿ- ೨
ಟೊಮೇಟೊ -೧
ಮಸಾಲೆಗೆ-ಕೊತ್ತಂಬರಿ ಸೊಪ್ಪು ಒಂದು ಹಿಡಿ
ಚೆಕ್ಕೆ ೨ ತುಂಡು
ಲವಂಗ- ೨
ಮೊಗ್ಗು-೨
ಏಲಕ್ಕಿ-೨
ಶುಂಠಿ-೧ ತುಂಡು
ಬೆಳ್ಳುಳ್ಳಿ- ೪-೫ ಎಸಳು
ಅರಶಿನ -ಸ್ವಲ್ಪ
ಕಾಯಿಮೆಣಸು-೨
ಗರಂ ಮಸಾಲಾ -೨ ಸ್ಪೂನ್
ಉಪ್ಪು-ರುಚಿಗೆ ಎಣ್ಣೆ- ೫-೬ ಚಮಚ
ಮಾಡುವ ವಿಧಾನ
ಮೊದಲು ಮಸಾಲೆಗೆ ಒಂದು ಮಿಕ್ಸಿ ಜಾರ್ ಗೆ ಏಲಕ್ಕಿ ಲವಂಗ- ಮೊಗ್ಗು ಶುಂಠಿ ಬೆಳ್ಳುಳ್ಳಿ- ಕೊತ್ತಂಬರಿಸೊಪ್ಪು ಚೆಕ್ಕೆ ಕಾಯಿಮೆಣಸು ಹಾಕಿ ನುಣ್ಣಗೆ ರುಬ್ಬಿ. ನಂತರ ಒಂದು ಬಾಣಲೆಗೆ ೫ ರಿಂದ ೬ ಚಮಚ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ ನಂತರ ಅದಕ್ಕೆ ಟೊಮೇಟೊ ಹಾಕಿ ಸ್ವಲ್ಪ ಫ್ರೈ ಮಾಡಿ. ಹೆಚ್ಚಿದ ಬೇಯಿಸಿದ ತರಕಾರಿ ಕ್ಯಾರಟ್ ಬೀನ್ಸ್ ಹಾಕಿ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಫ್ರೈ ಮಾಡಿ ಸ್ವಲ್ಪ ಅರಶಿನ ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ. ಈಗ ಬೇಯಿಸಿದ ಅನ್ನ ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಘಮ್ ಪಲಾವ್ ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ