ಬೇಕಾಗುವ ಸಾಮಗ್ರಿಗಳು
ಗೋಬಿ-೧
ಕಾರ್ನ್ ಫ್ಲೋರ್- ೧/೨ ಕಪ್
ಮೈದಾ ಹಿಟ್ಟು- ೧ ಕಪ್
ಸೋಯಾ ಸಾಸ್- ೨ ಚಮಚ
ಕಾಯಿಮೆಣಸು -೨
ಕೆಂಪು ಮೆಣಸು-೪
ಟೊಮೇಟೊ-೨
ಶುಂಟಿ- ೧ ತುಂಡು
ಬೆಳ್ಳುಳ್ಳಿ- ೪
ಸಕ್ಕರೆ-- ೧/೨ ಚಮಚ
ಈರುಳ್ಳಿ-೨
ಕೊತ್ತಂಬರಿ ಸೊಪ್ಪು- ಸ್ವಲ್ಪ
ಉಪ್ಪು-ರುಚಿಗೆ
ಮೊದಲು ಹೂಕೋಸನ್ನು ಉದ್ದನೆ ಸಣ್ಣ ತುಂಡುಗಳಾಗಿ ಕಟ್ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಗೆ ಮೈದಾ ಕಾರ್ನ್ ಫ್ಲೋರ್ ನೀರು ಹಾಕಿ ತೆಳುವಾದ ಹದ ಮಾಡಿ ಅದಕ್ಕೆ ಗೋಬಿ ಹಾಕಿ ಎಣ್ಣೆಯಲ್ಲಿ ಫ್ರೈ ಮಾಡಿ ರುಚಿಗೆ ಉಪ್ಪು ಹಾಕಿ. ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ ಟೊಮೇಟೊ ಕೆಂಪುಮೆಣಸು ಬೇಯಿಸಿ. ತಣ್ಣಗಾದ ನಂತರ ಮಿಕ್ಸಿ ಜಾರ್ ಗೆ ಟೊಮೇಟೊ ಕೆಂಪುಮೆಣಸು ಶುಂಠಿ ಸ್ವಲ್ಪ ಸಕ್ಕರೆ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಿ. ನಂತರ ಒಂದು ಬಾಣಲೆ ಇಟ್ಟು ಅದಕ್ಕೆ ೪ ಸ್ಪೂನ್ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ ಬೆಳ್ಳುಳ್ಳಿ- ಹಾಕಿ ಫ್ರೈ ಮಾಡಿ ನಂತರ ೨ ಸ್ಪೂನ್ ಸೋಯಾ ಸಾಸ್ ಹಾಕಿ. ನಂತರ ರುಬ್ಬಿದ ಟೊಮೇಟೊ ಪೇಸ್ಟ್ ಹಾಕಿ ಸ್ವಲ್ಪ ನೀರು ಹಾಕಿ ಫ್ರೈ ಮಾಡಿ. ನಂತರ ಒಂದು ಬೌಲ್ ಗೆ ೧ ಸ್ಪೂನ್ ಕಾರ್ನ್ ಫ್ಲೋರ್ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಬಾಣಲೆಗೆ ಹಾಕಿ ಗ್ರೇವಿ ದಪ್ಪ ಬರಲು ನಂತರ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ಉಪ್ಪು ಹಾಕಿ ಕೊನೆಗೆ ಕರಿದ ಗೋಬಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ರುಚಿಯಾದ ಸಿಂಪಲ್ ಗೋಬಿ ಮಂಚೂರಿಯನ್ ರೆಡಿ ಆಗುತ್ತದೆ
ಕರಿಯಲು-ಎಣ್ಣೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ