ತುಂಬಾ ರುಚಿಯಾದ ಶಾವಿಗೆ ಬಾತ್/shaavige bath recipe


ಬೇಕಾಗುವ ಸಾಮಗ್ರಿಗಳು  

ಕುಚುಲಕ್ಕ್ಕಿ/ಬೆಲ್ತಿಗೆ ಅಕ್ಕಿ-೨ ಕಪ್ ನೆಲಗಡಲೆ -swalpa 

ಉಪ್ಪು ರುಚಿಗೆ  

ಒಗ್ಗರೆಣೆಗೆ 

ಎಣ್ಣೆ-೪ ಸ್ಪೂನ್ 

ಸಾಸಿವೆ- ೧ ಸ್ಪೂನ್ 

ಉದ್ದಿನ ಬೇಳೆ - ೧ ಸ್ಪೂನ್ 

ಕಡ್ಲೆ ಬೇಳೆ -೧ ಚಮಚ 

ಕಾಯಿಮೆಣಸು ೩  

ಸಕ್ಕರೆ-೧ ಚಮಚ 

ತೆಂಗಿನ ತುರಿ-೧/೨ ಕಪ್

ಈರುಳ್ಳಿ- ೧

ಅರಶಿನ -ಸ್ವಲ್ಪ 

ಮೊದುಲ ಅಕ್ಕಿ ತೊಳೆದು ೮ ಗಂಟೆ ನೆನೆಸಿಡಿ. ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿ ಸ್ವಲ್ಪ ಉಪ್ಪು ಸೇರಿಸಿ. ರುಬ್ಬಿದ ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಬೇಯಿಸಿ ಗಟ್ಟಿ ಹದ ಮಾಡಿ ಉಂಡೆಗಳಾಗಿ ಮಾಡಿ ಒತ್ತು ಶಾವಿಗೆಯಲ್ಲಿ ಹಾಕಿ ಶಾವಿಗೆ ಮಾಡಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ ೪ ಚಮಚ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಾಸಿವೆ- ಉದ್ದಿನ ಬೆಲೆ ಕಡ್ಲೆಬೇಳೆ ಹಾಕಿ ಫ್ರೈ ಮಾಡಿ ಅದಕ್ಕೆ ಕರಿಬೇವು ಈರುಳ್ಳಿ ಕಾಯಿಮೆಣಸು ಹಾಕಿ ಫ್ರೈ ಮಾಡಿ ನಂತರ ಅದಕ್ಕೆ ಹರಷಿಣ ತೆಂಗಿನ ತೂರಿ ಸಕ್ಕರೆ ಹಾಕಿ ಫ್ರೈ ಮಾಡಿ ಅದಕ್ಕೆ ಶಾವಿಗೆ ರುಚಿಗೆ ಉಪ್ಪು ಹಾಕಿ ಬಿಸಿ ಮಾಡಿ ಕೊನೆಗೆ ಲಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಶಾವಿಗೆ ಬಾತ್ ready


ಕೊನೆಗೆ- ಲಿಂಬೆ 

ಕಾಮೆಂಟ್‌ಗಳು