ದೋಸೆ ಅನ್ನ ಚಪಾತಿಗೆ ಸಿಂಪಲ್ ತೆಂಗಿನ ಸಾರು/ರಸಂ/coconut rasam/saaru


ಬೇಕಾಗುವ ಸಾಮಗ್ರಿಗಳು 

ಮಸಾಲೆಗೆ-

ತೆಂಗಿನ ತುರಿ-೧ ಕಪ್ 

ಕೊತ್ತಂಬರಿಿ ಬೀಜ-3 

ಜೀರಿಗೆ- ೧ ಚಮಚ

 ಮೆಂತೆ-೧/೪ ಕಾಲು ಚಮಚ

ಕೆಂಪು ಮೆಣಸು- 6-7

ಬೆಳ್ಳುಳ್ಳಿ- 4-5 ಎಸಳು

ಹುಳಿ -ನೆಲ್ಲಿಕಾಯಿ ಗಾತ್ರ

 ಅರಶಿನ- ೧/೨ ಚಮಚ

 ಒಗ್ಗರೆಣೆಗೆ- ಎಣ್ಣೆ-೪ ಚಮಚ 

ಸಾಸಿವೆ 1 ಚಮಚ 

ಉದ್ದಿನ ಬೇಳೆ 1 ಚಮಚ

ಕರಿಬೇವು-2 ಎಸಳು

ಟೊಮೇಟೊ- 1

ರುಚಿಗೆ-- ಉಪ್ಪು 

ಮಾಡುವ ವಿಧಾನ ಬಾಣಲೆಗೆ- ಕೊತ್ತಂಬರಿ ಬೀಜ ಜೀರಿಗೆ- ಮೆಂತೆ ಮೆಣಸು ತೆಂಗಿನ ತುರಿ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಹುರಿದ ಮಸಾಲೆಯನ್ನು ಮಿಕ್ಸಿ ಜಾರ್ ಗೆ ಹಾಕಿ ಅದಕ್ಕೆ ಹುಳಿ ಬೆಳ್ಳುಳ್ಳಿ- ಈರುಳ್ಳಿ ಹಾಕಿ ಚೆನ್ನಾಗಿ ನುಣ್ಣಗೆ ನೈಸ್ ಆಗಿ ರುಬ್ಬಿ.ನಂತರ ಬಾಣಲೆಗೆ ಎಣ್ಣೆ ಹಾಕಿ ಒಗ್ಗರೆಣೆಗೆ ಸಾಸಿವೆ- ಉದ್ದಿನಬೇಳೆ ಕರಿಬೇವು ಹಾಕಿ. ನಂತರ ಉದ್ದನೆ ಹೆಚ್ಚಿದ ಟೊಮೇಟೊ ಈರುಳ್ಳಿ ಹಾಕಿ ರುಬ್ಬಿದ ಮಸಾಲೆಯನ್ನು ಹಾಕಿ ಅದಕ್ಕೆ ಸಾರಿನ ಹದಕ್ಕೆ ಬರುವವರೆಗೂ ನೀರು ಹಾಕಿ ನಂತರ ಕೊನೆಗೆ ಉಪ್ಪು ಹಾಕಿದರೆ ತೆಂಗಿನ ಕಾಯಿ- ರಸಂ ರೆಡಿ ಟು ಸರ್ವ್ 

ಕಾಮೆಂಟ್‌ಗಳು