೧ ಕಪ್ ಗೋಧಿ ಹಿಟ್ಟಿನಿಂದ ಮಾಡಿ ರುಚಿಯಾದ ಪಾಸ್ತಾ/wheat floor tasty paastha


ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು-೧ ಕಪ್ 

ಟೊಮೇಟೊ- ೨ 

ಈರುಳ್ಳಿಿ -೨ 

ಗರಂ ಮಸಾಲಾ-೧ ಸ್ಪೂನ್

ಕೆಂಪು ಮೆಣಸಿನ ಪುಡಿ-೧ ಸ್ಪೂನ್

ಕಾಯಿ- ಮೆಣಸು-೨ 

ಸೋಯಾ ಸಾಸ್- ೧ ಸ್ಪೂನ್ 

ಕಾರ್ನ್ ಫ್ಲೋರ್-೧ ಚಮಚ 

ಕೊತ್ತಂಬರಿ ಸೊಪ್ಪು- ಸ್ವಲ್ಪ 

ರುಚಿಗೆ ಉಪ್ಪು 

ಮಾಡುವ ವಿಧಾನ ೧ ಕಪ್ ಗೋಧಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಚಪಾತಿ ರೀತಿ ಲಟ್ಟಿಸಿ ಚಾಕುವಿನಿಂದ ಉದ್ದನೆ ಚೌಕ ಆಕಾರದಲ್ಲಿ ಕತ್ತರಿಸಿ ರೋಲ್ಲ್ಗಳಾಗಿ ಮಾಡಿಕೊಳ್ಳಿ ನಂತರ ಒಂದು ಪಾತ್ರೆಗೆ ನೀರು ಹಾಕಿ ಗೋಧಿ ರೋಲ್ಲ್ಗಳನ್ನು ಬೇಯಿಸಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ ಬೆಳ್ಳುಳ್ಳಿ- ಈರುಳ್ಳಿ ಹಾಕಿ ಫ್ರೈ ಮಾಡಿ. ಟೊಮೇಟೊ ಮಿಕ್ಸಿ ಜಾರ್ ಗೆ ಹಾಕಿ ಪೇಸ್ಟ್ ಮಾಡಿ. ಟೊಮೇಟೊ ಪೇಸ್ಟ್ ಬಾಣಲೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಗರಂ ಮಸಾಲಾ ಖಾರದ ಪುಡಿ ಸೋಯಾ ಸಾಸ್ ಹಾಕಿ ಫ್ರೈ ಮಾಡಿ.ಒಂದು ಸ್ಪೂನ್ ಕಾರ್ನ್ ಫ್ಲೋರ್ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಬಾಣಲೆಗೆ ಹಾಕಿ ನಂತರ ಗೋಧಿ ಹಿಟ್ಟಿನ ರೋಲ್ ಗಳನ್ನೂ ಹಾಕಿ ರುಚಿಗೆ ಉಪ್ಪು ಸೇರಿಸಿ ಕೊನೆಗೆ ಕೊತ್ತಂಬರಿಸೊಪ್ಪು ಹಾಕಿದರೆ ರುಚಿಯಾದ ಪಾಸ್ತಾ ರೆಡಿ.

ಕಾಮೆಂಟ್‌ಗಳು