ರುಚಿಯಾದ ಮಂಗಳೂರು ಗರಿ ಗರಿ ಚಟ್ಟಂಬಡೆ/ಮಸಾಲಾ ವಡಾ/masala chattambade /how to make masala vada?

ಬೇಕಾಗುವ ಸಾಮಗ್ರಿಗಳು  

ಕಡ್ಲೆ ಬೀಳೇ -1 1/2  ಕಪ್

ಉದ್ದಿನ ಬೇಳೆ-6-7 ಚಮಚ

ಹಿಂಗು- ಸ್ವಲ್ಪ

ಶುಂಠಿ-1 ತುಂಡು

ಕರಿಬೇವು-2 ಎಸಳು

ಕೊತ್ತಂಬರಿ ಸೊಪ್ಪು-ಸ್ವಲ್ಪ

ಕಾಯಿ ಮೆಣಸು-ಸ್ವಲ್ಪ

ಅಚ್ಚ ಖಾರದ ಪುಡಿ-1 ಚಮಚ

ಜೀರಿಗೆ-1 ಚಮಚ

ಉಪ್ಪು-ರುಚಿಗೆ

ಮೊದಲು ಕಡ್ಲೆ ಬೆಳೆ ಮತ್ತು ಉದ್ದಿನ ಬೇಳೆ ೧ ಪಾತ್ರೆಗೆ ಹಾಕಿ ಒಂದು ಗಂಟೆ ನೆನೆಸಿದ ನಂತರ ನೀರು ಸಂಪೂರ್ಣವಾಗಿ ತೆಗೆಯಿರಿ.ಸ್ವಲ್ಪ ಬೇಳೆ ತೆಗೆದಿಟ್ಟುಕೊಳ್ಳಿ. ನಂತರ ಉಳಿದ ಎಲ್ಲ ಬೆಳೆಯನ್ನು ಮಿಕ್ಸ್ ಜಾರ್ ಗೆ ಹಾಕಿ ಅದಕ್ಕೆ ಶುಂಠಿ ಇಂಗು ಖಾರದ ಪುಡಿ ಹಾಕಿ ತರಿ ತರಿಯಾಗಿ ರುಬ್ಬಿ.ಅದಕ್ಕೆ ತೆಗೆದಿಟ್ಟ ಬೆಳೆಯನ್ನು ಹಾಕಿ.ಹೆಚ್ಚಿದ ಬೇವಿನ ಸೊಪ್ಪು,ಕೊತ್ತಂಬರಿ ಸೊಪ್ಪು,ಕಾಯಿಮೆಣಸು ಹಾಕಿ ಮಿಕ್ಸ್ ಮಾಡಿ ಉಪ್ಪು ಸೇರಿಸಿ ಉಂಡೆಗಳಾಗಿ ಮಾಡಿ ತಟ್ಟಿ ಎಣ್ಣೆಯಲ್ಲಿ ಕೆಂಪಗೆ ಆಗುವರೆಗೂ ಕರೆಯಿರಿ.ಕರಿದ ವಡೆಗಳನ್ನು ಪ್ಲೇಟ್ ನಲ್ಲಿ ಹಾಕಿದರೆ ರುಚಿಯಾದ ಚಟ್ಟಂಬಡೆ ರೆಡಿ 


  

ಕಾಮೆಂಟ್‌ಗಳು