ಹಬ್ಬಕ್ಕೆ ವಿಶೇಷವಾದ ರಸಭರಿತ ಜಿಲೇಬಿ ಕೇವಲ 10 ನಿಮಿಷಗಳಲ್ಲಿ ಮಾಡಿ /in 10 minute juicy and sweety jilebi/how to make jilebi?
ಬೇಕಾಗುವ ಸಾಮಾಗ್ರಿಗಳು
ಮೈದಾ ಹಿಟ್ಟು-1 ಕಪ್
ಮೊಸರು-1/2 ಕಪ್
ಫುಡ್ ಕಲರ್-ಸ್ವಲ್ಪ
ನೀರು-ಹದ ಮಾಡಲು
ಸೋಡಾ-1 ಚಿಟಿಕೆ
ಬೇಕಿಂಗ್ ಪೌಡರ್-1 ಚಿಟಿಕೆ
ತುಪ್ಪ-1 ಸ್ಪೂನ್
ಸಕ್ಕರೆ-2 ಕಪ್
ಕೇಸರಿ-ಸ್ವಲ್ಪ
11/2 ಕಪ್ ನೀರು
ನಿಂಬೆ ಹಣ್ಣು-ಸ್ವಲ್ಪ
ಸ್ವಲ್ಪ-ಫುಡ್ ಕಲರ್
ಮಾಡುವ ಕ್ರಮ
ಒಂದು ಪಾತ್ರೆಗೆ 1 ಕಪ್ ಮೈದಾ ಹಾಕಿ ಅದಕ್ಕೆ 1/2 ಕಪ್ ಮೊಸರು ಹಾಕಿ, ಸ್ವಲ್ಪ ಫುಡ್ ಕಲರ್ ಎಲ್ಲ ಚೆನ್ನಾಗಿ ಮಿಕ್ಸ್ ಆಗುವಾಗ ಹಾಗೆ ಕಲಸಿ.ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗೆ ಕಲಸಿ ತುಂಬಾ ಗಟ್ಟಿ ಅಥವಾ ತುಂಬಾ ನೀರು ಆಗದ ಹಾಗೆ ನೋಡಿ.ಹಿಟ್ಟು ಕಲೆಸಿ ಆದ ನಂತರ ಅದಕ್ಕೆ ೧ಚಿಟಿಕೆ ಸೋಡಾ,ಬೇಕಿಂಗ್ ಪೌಡರ್, ೧ ಚಮಚ ತುಪ್ಪ ಹಾಕಿ ಕಲಸಿ ೧೦ ನಿಮಿಷ ನೆನೆಯಲು ಬಿಡಿ.
ಪಾಕ ಮಾಡಲು.
2 ಕಪ್ ಸಕ್ಕರೆಗೆ 1 1/2 ಕಪ್ ನೀರು ಹಾಕಿ ಸಕ್ಕರೆ ಚೆನ್ನಾಗಿ ಕರಾಗುವವರೆಗೂ ಕುಧಿಸಿ ನಂತರ ಲಿಂಬೆ ರಸ ಹಾಕಿ ಅಂಟು ಪಾಕ ಮಾಡಿ ತೆಗಿದಿಡಿ. ಒಂದು ಹಾಲಿನ ಪ್ಯಾಕೆಟ್ ತೊಳೆದು ಅದರ ಒಳಗೆ ಹಿಟ್ಟು ಹಾಕಿ ಕೋನ್ ಶೇಪ್ ಮಾಡಿ. ಎಣ್ಣೆಯಲ್ಲಿ ರೌಂಡ್ ಆಗಿ ಹಾಕಿ ಹದ ಉರಿಯಲ್ಲಿ ಕರಿಯಿರಿ.ನಂತರ ಅದನ್ನು ಪಾಕಕ್ಕೆ ಹಾಕಿದರೆ ರಸಭರಿತ ಜಿಲೇಬಿ ಸವಿಯಲು ಸಿದ್ಧ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ