ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2 ಕಪ್
ತೆಂಗಿನ ತುರಿ-2 ಕಪ್
ಬೆಲ್ಲ-1 ಕಪ್
ನೀರು-ಸ್ವಲ್ಪ
ಉಪ್ಪು-ರುಚಿಗೆ
ಹರಷಿಣ ಎಲೆ-7-8
ಮಾಡುವ ವಿಧಾನ-
ಬೆಳ್ತಿಗೆ ಅಕ್ಕಿಯನ್ನು 2 ಗಂಟೆಗಳ ಕಾಲ ನೆನೆಸಿ, ನಂತರ ಮಿಕ್ಸಿ ಜಾರ್ ಗೆ ಹಾಕಿ ಅದಕ್ಕೆ ತೆಂಗಿನ ತುರಿ ಸ್ವಲ್ಪ ನೀರು ಉಪ್ಪು ರುಚಿಗೆ ಹಾಕಿ ಚೆನ್ನಾಗಿ ರುಬ್ಬಿ. ನಂತರ ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಗಟ್ಟಿಯಾಗುವವರೆಗೂ ಒಲೆಯಲ್ಲಿ ಇತ್ತು ಮಾಗಿಸಬೇಕು. ಚೆನ್ನಾಗಿ ಮಾಗಿಸಿದ ನಂತರ ತೆಗೆದು ಪಕ್ಕದಲ್ಲಿ ಇಡೀ. ತೆಂಗಿನ ತುರಿ ಬೆಲ್ಲ ಮಿಕ್ಸ್ ಮಾಡಿ ಸ್ವಲ್ಪ ಹದವಾಗಿ ಪಾಕ ಬರೆಸಿ ಒಂದು ಬೌಲ್ ಗೆ ಹಾಕಿ. ನಂತರ ಮಾಗಿಸಿದ ಮಣ್ಣಿಯನ್ನು ಹರಷಿಣ ಎಲೆಗೆ ತೆಳುವಾಗಿ ಹಚ್ಚಿ ತೆಂಗಿನ ಪಾಕ ಮದ್ಯದಲ್ಲಿ ಹಾಕಿ ಕಡಬಿನ ತಟ್ಟೆಯಲ್ಲಿ ಹಾಕಿ ಬೇಯಿಸಿದರೆ ಹರಷಿಣ ಎಲೆ ಕಡಬು ಸವಿಯಲು ಸಿದ್ದ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ