ದೇವಸ್ಥಾನದಲ್ಲಿ ಪ್ರಸಾದಕ್ಕೆ ಸಿಗುವ ಪರ್ಫೆಕ್ಟ್ ಪುಳಿಯೋಗರೆ ಬೆಳಗ್ಗಿನ ಉಪಹಾರಕ್ಕೆ /puliyogare/how to make puliyogare?


ಬೇಕಾಗುವ ಸಾಮಗ್ರಿಗಳು

ಅಡುಗೆ ಎಣ್ಣೆ-೬-೭ ಸ್ಪೂನ್

ಕಡ್ಲೆ ಬೀಜ-ಕಾಲು ಕಪ್

ಒಗ್ಗರೆಣೆಗೆ-ಎಣ್ಣೆ,ಸಾಸಿವೆ,ಕಡ್ಲೆ ಬೆಲೆ,ಉದ್ದಿನ ಬೆಲೆ,ಇಂಗು

ಖಾರ ಮೆಣಸು-೫-೬

ನೆನೆಸಿದ ಹುಣಿಸೆ ಹುಳಿ-ಕಾಲು ಕಪ್(ಅರ್ಧ ನಿಂಬೆ ಗಾತ್ರದಷ್ಟು)

ಬೆಲ್ಲ-ಸ್ವಲ್ಪ

MTR ಪುಳಿಯೋಗರೆ ಪುಡಿ-೨

ಬೇವಿನ ಸೊಪ್ಪು-ಸ್ವಲ್ಪ

ಕೊತ್ತಂಬರಿ ಸೊಪ್ಪು-ಸ್ವಲ್ಪ

ಉಪ್ಪು-ರುಚಿಗೆ

ಬೇಯಿಸಿದ ಅನ್ನ-೩-೪ ಕಪ್

ಮಾಡುವ ವಿಧಾನ- 

ಬಾಣಲೆಗೆ ೬-೭ ಚಮಚ ಎಣ್ಣೆ ಹಾಕಿ ಅದಕ್ಕೆ ಮಧ್ಯಮ ಉರಿಯಲ್ಲಿ ಕಡ್ಲೆಬೀಜ ಹಾಕಿ ಗೋಲ್ಡನ್ ಕಲರ್ ಬರುವರೆಗೂ ಫ್ರೈ ಮಾಡಿ.ನಂತರ ಒಂದು ಬೌಲ್ ಗೆ ಹಾಕಿ ಸೆಪೆರೇಟ್ ಆಗಿ ಇಡೀ.ನಂತರ ಅದೇ ಬಾಣಲೆಗೆ ಸಾಸಿವೆ,ಕಡ್ಲೆ ಬೇಳೆ,ಉದ್ದಿನ ಬೇಳೆ, ಬೇವಿನ ಸೊಪ್ಪು,ಇಂಗು ಹಾಕಿ ಹುರಿಯಿರಿ.ನಂತರ ೫-೬ ಕೆಂಪು ಮಾನಸ ಕಟ್ ಮಾಡಿ ಹಾಕಿ,ಲೈಟ್ ಗೋಲ್ಡನ್ ಫ್ರೈ ಬರೋವರೆಗೂ ಫ್ರೈ ಮಾಡಿ.ನಂತರ ನೆನೆಸಿದ ಹುಳಿಯಾ ರಸ ಹಾಕಿ ಹುರಿದು ಸ್ವಲ್ಪ ಬೆಲ್ಲ ರುಚಿಗೆ ಉಪ್ಪು ಹಾಕಿ ಮಧ್ಯಮ ಫ್ಲ್ಯಾಮೆನಲ್ಲಿ ಸ್ವಲ್ಪ ಗಟ್ಟಿಯಾಗುವರೆಗೂ ಫ್ರೈ ಮಾಡಿ ೨ ಪ್ಯಾಕ್ MTR ಪುಳಿಯೋಗರೆ ಪೌಡರ್ ಹಾಕಿ  ಸ್ವಲ್ಪ ಫ್ರೈ ಮಾಡಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಡಿದ ಕಡ್ಲೆ ಬೀಜ ಹಾಕಿ ನಂತರ ಬೇಯಿಸಿದ ಉದುರಾದ ರೈಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಪುಳಿಯೋಗರೆ ತಿನ್ನಲು ರೆಡಿ.

ಕಾಮೆಂಟ್‌ಗಳು