ಮೃದುವಾದ ರವಾ ಇಡ್ಲಿ ರೆಸಿಪಿ ಮತ್ತು ಕೊತ್ತಂಬರಿ ಸೊಪ್ಪಿನ ಕಾಯಿ ಚಟ್ನಿ/soft rava idli with coriyander coconut chutney


ಬೇಕಾಗುವ ಸಾಮಗ್ರಿಗಳು

ಸಣ್ಣ ರವೇ-5 ಕಪ್ 

ಉದ್ದಿನ ಬೇಳೆ-೨ ಕಪ್

ಸೋಡಾ-೧ ಚಿಟಿಕೆ 

ಉಪ್ಪು ರುಚಿಗೆ 


ಚಟ್ನಿಗೆ 

ಕೊತ್ತಂಬರಿ ಸೊಪ್ಪು-ಸ್ವಲ್ಪ

ಹುರಿಗಡಲೆ-೨ ಸ್ಪೂನ್ 

ಕಾಯಿ ಮೆಣಸು-೨

ಕಾಯಿ ತುರಿ-೧ ಕಪ್

ರುಚಿಗೆ ಉಪ್ಪು 


ಮಾಡುವ ವಿಧಾನ

ಮೊದಲು ಒಂದು ಬಟ್ಟಲಿನಲ್ಲಿ ೨ ಕಪ್ ಉದ್ದಿನ ಬೇಳೆ ಹಾಕಿ ೨-೩ ಗಂಟೆ ನೆನೆಸಿಡಿ. ನಂತರ ನೆನೆಸಿದ ಉದ್ದಿನ ಬೇಳೆ ತೊಳೆದು ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ನುಣ್ಣಗೆ ಗ್ರಾಇಂಡ್  ಮಾಡಿ ೮ ಗಂಟೆಗಳ ಕಾಲ ಇಡಿ. ನಂತರ  ಸಣ್ಣ ರವೆಯನ್ನು ಸ್ವಲ್ಪ ಹುರಿದು ತಣ್ಣಗಾದ ನಂತರ ಉದ್ದಿನ ಹಿಟ್ಟಿಗೆ ಮಿಕ್ಸ್ ಮಾಡಿ ಇಡ್ಲಿ ಹಿಟ್ಟಿನ ಹದಕ್ಕೆ ತಂದು ೨೦ ನಿಮಿಷದ ನಂತರ ಇಡ್ಲಿ ತಟ್ಟೆ ಯಲ್ಲಿ ಹಿಟ್ಟು ಹಾಕಿ ಬೇಯಿಸಿದರೆ ಮೃದುವಾದ ರವಾ ಇಡ್ಲಿ ರೆಡಿ.

ಚಟ್ನಿ ಮಾಡುವ ಕ್ರಮ.

ಮಿಕ್ಸಿ ಜಾರ್ ಗೆ ಕೊತ್ತಂಬರಿ ಸೊಪ್ಪು ತೆಂಗಿನ ತುರಿ ಕಾಯಿ ಮೆಣಸು  ಹುರಿಗಡಲೆ ರುಚಿಗೆ ಉಪ್ಪು ನೀರು ಹಾಕಿ  ನುಣ್ಣಗೆ ರುಬ್ಬಿದರೆ ರುಚಿಯಾದ ಚಟ್ನಿ ಇಡ್ಲಿಗೆ ರೆಡ್ಯಾಗುತ್ತದೆ.

ಕಾಮೆಂಟ್‌ಗಳು