ಬೆಳಗ್ಗಿನ ಉಪಹಾರಕ್ಕೆ ಏನಾದರೂ ವಿಶೇಷವಾಗಿ ಮಾಡಬೇಕು ಅನ್ನಿಸಿದರೆ ರುಚಿಯಾದ ತೆಂಗಿನ ದೋಸೆ ಟ್ರೈ ಮಾಡಿ/coconut dosa/ morning tiffen

ಪ್ರತಿದಿನ ಬೆಳಗ್ಗಿನ ಉಪಹಾರಕ್ಕೆ ಏನಾದರೂ ವಿಶೇಷವಾಗಿ ಮಾಡಬೇಕು ಅನ್ನಿಸಿದರೆ ರುಚಿಯಾದ ತೆಂಗಿನ ದೋಸೆ ಟ್ರೈ ಮಾಡಿ 


ಬೇಕಾಗುವ ಸಾಮಗ್ರಿಗಳು-

ಅಕ್ಕಿ-೨ ಕಪ್

ತೆಂಗಿನಕಾಯಿ- ೧ ಕಪ್

ನೀರು-ರುಬ್ಬಲು 

ಮೆಂತ್ಯೆ-೧ ಟೀ ಸ್ಪೂನ್

ಉಪ್ಪು-ರುಚಿಗೆ


ಮಾಡುವ ವಿಧಾನ-

ಮೊದಲು ಒಂದು ಪಾತ್ರೆ ತೆಗೆದುಕೊಂಡು ಅದು ಮುಳುಗುವಷ್ಟು ಅಕ್ಕಿ ಮತ್ತು ಮೆಂತೆ ತೆಗೆದುಕೊಂಡು ನೀರು ಹಾಕಿ ೪ ನೆನೆಸಿಕೊಳ್ಳಿ. ಈಗ ಅಕ್ಕಿಯನ್ನು ತೆಗೆದು ಮಿಕ್ಸಿಯಲ್ಲಿ ರುಬ್ಬಿ.

ನಂತರ ಮಿಕ್ಸಿ ಮಡಿದ ಅಕ್ಕಿ ಹಿಟ್ಟನ್ನು ಪಾತ್ರೆಗೆ ವರ್ಗಾವಣೆ ಮಾಡಿಟ್ಟುಕೊಳ್ಳಿ.

ಈಗ ಮಿಕ್ಸಿಯಲ್ಲಿ ತೆಂಗಿನ ತುರಿ ಮತ್ತು ೧ ಕಪ್ ನೀರು ಹಾಕಿ ಮೃದುವಾಗಿ ರುಬ್ಬಿ.ಪೇಸ್ಟ್ ಮಾಡಿದ ತೆಂಗಿನ ಕಾಯಿಯನ್ನು ಅಕ್ಕಿ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.೮ ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಇಡೀ. ದಪ್ಪ ದೋಸೆ ತಯಾರಿಸಲು ಬೇಕಾದಷ್ಟು ನೀರು ಹಾಕಿ ಉಪ್ಪು ಮಿಶ್ರಣ ಮಾಡಿ ಬಿಸಿ ತವಾದ ಮೇಲೆ ದೋಸೆ ಹಿಟ್ಟು ಹೊಯ್ದರೆ ರುಚಿಕರವದ ಸ್ಪೆಷಲ್ ತೆಂಗಿನ ದೋಸೆ ರೆಡಿ .

ಕಾಮೆಂಟ್‌ಗಳು