ಸಂಜೆಯ ಸ್ನ್ಯಾಕ್ಕ್ಗೆ ದೊಡ್ಡ ಮೆಣಸಿನ ಪೋಡಿ/ದೊಡ್ನ ಮೆಣಸಿನ ಬಜ್ಜಿ/dodna menasina bajji/evening snack/how to make dodna bajji?
ಬೇಕಾಗುವ ಸಾಮಗ್ರಿಗಳು
ದೊಡ್ನ ಮೆಣಸು-೩-೪
ಕಡ್ಲೆ ಹಿಟ್ಟು-೨ ಕಪ್
ಜೀರಿಗೆ-೧ ಸ್ಪೂನ್
ಇಂಗು-ಸ್ವಲ್ಪ
ಉಪ್ಪು-ರುಚಿಗೆ
ನೀರು
ಎಣ್ಣೆ-ಕರಿಯಲು
ಮಾಡುವ ವಿಧಾನ-
ದೊಡ್ನ ಮೆಣಸನ್ನು ನೀರಿನಲ್ಲಿ ತೊಳೆದು ಉದ್ದನೆ ಕಟ್ ಮಾಡಿ ಪ್ಲೇಟ್ನಲ್ಲಿ ಇಡಿ.ಒಂದು ಪಾತ್ರೆಗೆ ಕಡ್ಲೆ ಹಿಟ್ಟು,ಜೀರಿಗೆ,ಇಂಗು ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಜ್ಜಿ ಹಿಟ್ಟಿನ ಹದಕ್ಕೆ ತನ್ನಿ.ನಂತರ ಸ್ಟೋವೆನಲ್ಲಿ ಬಾಣಲೆ ಇಟ್ಟು ಕರಿಯಲು ಎಣ್ಣೆ ಯನ್ನು ರೆಡಿ ಮಾಡಿ. ಒಂದೊಂದೇ ಕಟ್ ಮಾಡಿದ ಮೆಣಸಿನ ತುಂಡನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಬಾಣಲೆಯಲ್ಲಿ ಕರಿಯಲು ಹಾಕಿ.ಕರಿದ ಮೆಣಸನ್ನು ಒಂದು ಪ್ಲೇಟ್ ಗೆ ವರ್ಗಿಯಿಸಿದರೆ ರುಚಿಯಾದ ಮೆಣಸಿನ ಪೋಡಿ ಸವಿಯಲು ಸಿದ್ದ.
ಗ್ರೀನ್ ಚಟ್ನಿ
ಬೇಕಾಗುವ ಸಾಮಗ್ರಿಗಳು
ಕೊತ್ತಂಬರಿ ಸೊಪ್ಪು-೧ ಹಿಡಿ
ಕಾಯಿಮೆಣಸು-೧-೨
ಟೊಮೇಟೊ-೧-೨
ಉಪ್ಪು-ರುಚಿಗೆ
ಮಿಕ್ಸಿ ಜಾರ್ಗೆ ಕೊತ್ತಂಬರಿ ಸೊಪ್ಪು,ಟೊಮೇಟೊ ,ಕಾಯಿ ಮೆಣಸು,ರುಚಿಗೆ ಉಪ್ಪು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿದರೆ ಗ್ರೀನ್ ಚಟ್ನಿ ಬಜ್ಜಿ ಜೊತೆ ಸವಿಯಲು ರೆಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ