ಸರಿಯಾದ ಅಳತೆಯೊಂದಿಗೆ ಹೋಟೆಲ್ ಸ್ಟೈಲ್ ಪರ್ಫೆಕ್ಟ್ ಪಡ್ಡು ರೆಸಿಪಿ/hotel style crispy paddu/how to make perfect paddu?


ಬೇಕಾಗುವ ಸಾಮಗ್ರಿಗಳು 

ರೇಷನ್ ಅಕ್ಕಿ-೨ ಗ್ಲಾಸ್

ಉದ್ದಿನ ಬೆಲೆ-ಮುಕ್ಕಾಲು ಗ್ಲಾಸ್

ಕಡ್ಲೆ ಬೇಳೆ-ಕಾಲು ಕಪ್

ತೊಗರಿ ಬೇಳೆ-ಕಾಲು ಕಪ್

ಮೆಂತೆ-೧ ಸ್ಪೂನ್

ಅವಲಕ್ಕಿ-೧/೨ ಕಪ್

ಬೇಕಿಂಗ್ ಸೋಡಾ-ಚಿಟಿಕೆ

ಉಪ್ಪು-ರುಚಿಗೆ

ಎಣ್ಣೆ-ಹಂಚಿಗೆ ಹಾಕಲು 


ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ರೇಷನ್ ಅಕ್ಕಿ,ಉದ್ದಿನಬೇಳೆ,ತೊಗರಿಬೇಳೆ,ಕಡ್ಲೆಬೇಳೆ,ಸ್ವಲ್ಪ ಮೆಂತೆ, ಹಾಕಿ ಚೆನ್ನಾಗಿ ತೊಳೆದು ೪-೫ ಗಂಟೆ ನೆನೆಸಿ.ನಂತರ ಅದಕ್ಕೆ ಅರ್ಧ ಕಪ್ ಅವಲಕ್ಕಿ ಹಾಕಿ ದಪ್ಪವಾಗಿ ರುಬ್ಬಿ ಉಬ್ಬುವರೆಗೂ ೮ ಗಂಟೆ ಕಾಲ ಇಡೀ. ನಂತರ ಹಿಟ್ಟಿಗೆ ಬೇಕಿಂಗ್ ಸೋಡಾ,ರುಚಿಗೆ ಉಪ್ಪು ಹಾಕಿ ೧೫ ನಿಮಿಷ ಕಾಲ ಹಿಟ್ಟು ಹಾಗೆ ಇಡೀ.ನಂತರ ಪಡ್ಡಿನ ಹಂಚು ಕಾದ ನಂತರ ಪಡ್ಡಿನ ಹಿಟ್ಟು ಕಾದ ಹಂಚಿಗೆ ಹಾಕಿ ಬೇಯಿಸಿದರೆ ರುಚಿಯಾದ ಕ್ರಿಸ್ಪ್ಯ್ ಪಡ್ಡು ಸವಿಯಲು ಸಿದ್ಧ.

 

ಕಾಮೆಂಟ್‌ಗಳು