ರುಚಿಯಾದ ಪರ್ಫೆಕ್ಟ್ ಕುಷ್ಕ ರೈಸ್ ಕುಕ್ಕರ್ನಲ್ಲಿ ಮಾಡುವ ವಿಧಾನ/kushka rice/tasty hotel style kushka/how to make kushka rice/biriyaani


ಬೇಕಾಗುವ ಸಾಮಗ್ರಿಗಳು 

ಬಾಸ್ಮತಿ ಅಕ್ಕಿ-೧ ಗ್ಲಾಸ್

ನೀರು-೨ ಗ್ಲಾಸ್

ಬೆಳ್ಳುಳ್ಳಿ-೭-೮ ಎಸಳು

ಶುಂಠಿ-೧ ತುಂಡು 

ಕೊತ್ತಂಬರಿ ಸೊಪ್ಪು-ಸ್ವಲ್ಪ

ಪುದಿನ ಸೊಪ್ಪು-ಸ್ವಲ್ಪ

ಕಾಯಿಮೆಣಸು-೧

ಅಡುಗೆ ಎಣ್ಣೆ-೨-೩ ಸ್ಪೂನ್

ತುಪ್ಪ-೩-೪ ಸ್ಪೂನ್

ಈರುಳ್ಳಿ-೨

ಟೊಮೇಟೊ-೨-೩

ಚೆಕ್ಕೆ,ಲವಂಗ,ಏಲಕ್ಕಿ- ೨

ಗರಂ ಮಸಾಲಾ-೧ ಸ್ಪೂನ್

ಬಿರಿಯಾನಿ ಪೌಡರ್-೧/೨ ಸ್ಪೂನ್

ಹರಷಿಣ-ಕಾಲು ಚಮಚ

ಖಾರದ ಹುಡಿ-೧ ಚಮಚ

ಮೊಸರು-೩ ಚಮಚ

ಉಪ್ಪು-ರುಚಿಗೆ


ಮಾಡುವ ವಿಧಾನ 

ಮಿಕ್ಸಿ ಜಾರ್ ಗೆ ಬೆಳ್ಳುಳ್ಳಿ,ಶುಂಠಿ,ಪುದೀನಾ ಸೊಪ್ಪು,ಕೊತ್ತಂಬರಿ ಸೊಪ್ಪು,ಕಾಯಿಮೆಣಸು,ಸ್ವಲ್ಪ ನೀರು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ.ಕುಕ್ಕರ್ ಗೆ ಎಣ್ಣೆ,ತುಪ್ಪ, ಹಾಕಿ ಬಿಸಿ ಮಾಡಿ,ಬಿಸಿಯಾದ ತುಪ್ಪಕ್ಕೆ ಚೆಕ್ಕೆ,ಲವಂಗ,ಏಲಕ್ಕಿ ಹಾಕಿ ಫ್ರೈ ಮಾಡಿ,ನಂತರ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ,ಅದಕ್ಕೆ ರುಬ್ಬಿದ ಪೇಸ್ಟ್ ಹಾಕಿ ಫ್ರೈ ಮಾಡಿ. ಫ್ರೈ ಆದ ನಂತರ ಗರಂ ಮಸಾಲೆ, ಹರಷಿಣ,ಬಿರಿಯಾನಿ ಪೌಡರ್,ಕಾರದ ಹುಡಿ ಹಾಕಿ ಪುನಃ ಚೆನ್ನಾಗಿ ಬಾಡಿಸಿ ಈಗ ಸ್ವಲ್ಪ ಮೊಸರು ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ೨ ಗ್ಲಾಸ್ ನೀರು ಹಾಕಿ ೧ ಗ್ಲಾಸ್ ಅಕ್ಕಿ ಹಾಕಿ ಮೇಲೆ ಪುದಿನ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ೨ ವಿಶೇಲ್ ಕೂಗಿಸಿದರೆ ರುಚಿಯಾದ ಕುಷ್ಕ ರೈಸ್ ರೆಡಿ ಟು ಎಟ್


ಕಾಮೆಂಟ್‌ಗಳು