ಬೆಳಗ್ಗಿನ ಉಪಹಾರಕ್ಕೆ ರುಚಿಯಾದ ಟೊಮೇಟೊ ಖಾರ ಬಾತ್ /tasty tomato khara bath for morning tiffen/how to make tomato khara bath?


ಬೇಕಾಗುವ ಸಾಮಗ್ರಿಗಳು-

ರವಾ-೧ ಕಪ್

ನೀರು-೨ ಕಪ್

ತುಪ್ಪ-೨-೩ ಚಮಚ

ಸಾಸಿವೆ-೧ ಚಮಚ

ಜೀರಿಗೆ-೧ ಚಮಚ

ಉದ್ದಿನ ಬೇಳೆ-೧ ಚಮಚ

ಕಡ್ಲೆ ಬೇಳೆ- ೧ ಕಪ್

ಇಂಗು-೧ ಚಿಟಿಕೆ 

ಕರಿಬೇವು-೨ ಎಸಳು

ಈರುಳ್ಳಿ-೧-೨

ಬೀನ್ಸ್-೬-೭

ಕ್ಯಾರಟ್-೧ 

ಕಾಯಿಮೆಣಸು-೨ 

ಬಟಾಣಿ-ಕಾಲು ಕಪ್

ಟೊಮೇಟೊ-೨-೩

ಹರಷಿಣ-೧ ಸ್ಪೂನ್

ಖಾರದ ಪುಡಿ-೨ ಸ್ಪೂನ್

ಸಾಂಬಾರ್ ಪೌಡರ್- ೨ ಸ್ಪೂನ್

ರುಚಿಗೆ-ಉಪ್ಪು

ಕೊತ್ತಂಬರಿ ಸೊಪ್ಪು-ಕೊನೆಗೆ


ಮಾಡುವ ವಿಧಾನ

ಮೊದಲು ಒಗ್ಗರೆಣೆಗೆ ಬಾಣಲೆಗೆ ೨-೩ ಸ್ಪೂನ್ ತುಪ್ಪ ಹಾಕಿ ಕಾದ ನಂತರ ಸಾಸಿವೆ,ಜೀರಿಗೆ,ಉದ್ದಿನ ಬೇಳೆ,ಕಡ್ಲೆ ಬೇಳೆ,ಇಂಗು,ಕರಿಬೇವು,ಉದ್ದನೆ ಕಟ್ ಮಡಿದ ಹಸಿ ಮೆಣಸು ಹಾಕಿ ಫ್ರೈ ಮಾಡಿ,ನಂತರ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ.ಹೆಚ್ಚಿದ ಬೀನ್ಸ್,ಕ್ಯಾರಟ್ ,ಬಟಾಣಿ ಹಾಕಿ ಫ್ರೈ ಮಾಡಿ,ನಂತರ ಹೆಚ್ಚಿದ ಟೊಮೇಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ.ಹರಷಿಣ,ಸಾಂಬಾರ್ ಪೌಡರ್,ಖಾರದ ಹುಡಿ  ಸ್ವಲ್ಪ ನೀರು ಹಾಕಿ ೩-೪ ನಿಮಿಷ ಬೇಯಿಸಿ.ನಂತರ ೨ ಗ್ಲಾಸ್ ನೀರು ಹಾಕಿ ಅದಕ್ಕೆ ೧ ಕಪ್ ರವಾ,ರುಚಿಗೆ ಉಪ್ಪು ಹಾಕಿ ಬೆಂದ ನಂತರ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಟೊಮೇಟೊ ಖಾರ ಬಾತ್ ರೆಡಿ ಟು ಎಟ್.


ಕಾಮೆಂಟ್‌ಗಳು