ಬೇಕಾಗುವ ಸಾಮಗ್ರಿಗಳು
ಉದ್ದಿನ ಬೇಳೆ-ಕಾಲು ಕಿಲೋ
ಹಸಿಮೆಣಸು-5-6
ತೆಂಗಿನಕಾಯಿ ಸಣ್ಣ ಸಣ್ಣ ತುಂಡುಗಳು-ಸ್ವಲ್ಪ
ಕಾಳುಬಿ ಮೆಣಸು-ಸ್ವಲ್ಪ
ಕರಿಬೇವು-ಸ್ವಲ್ಪ
ತುರಿದ ಶುಂಠಿ-ಸ್ವಲ್ಪ
ರುಚಿಗೆ ಉಪ್ಪು
ಕರಿಯಲು-ಎಣ್ಣೆ
ಮಾಡುವ ವಿಧಾನ
ಉದ್ದಿನ ಬೇಳೆಯನ್ನು 2-3 ಸಲ ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನಿಸಿ. ಚೆನ್ನಾಗಿ ನೆನೆಸಿದ ಉದ್ದಿನ ಬೇಳೆಯನ್ನು ಸೋಸಿ ಮಿಕ್ಸಿ ಜಾರ್ನಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಗಟ್ಟಿಯಾದರೆ 2-3 ಸ್ಪೂನ್ ನೀರು ಹಾಕಿ ರುಬ್ಬಿ. ರುಬ್ಬಿದ ಹಿಟ್ಟಿಗೆ ಹೆಚ್ಚ್ಚಿದ ಹಸಿಮೆಣಸು,ಶುಂಠಿ ತುರಿ,ಕರಿಬೇವು,ಕಾಳು ಮೆಣಸು,ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಬಾಣಲೆಯಲ್ಲಿ ಎಣ್ಣೆ ಕರಿಯಲು ಇಟ್ಟು,ಮಿಕ್ಸಿ ಮಡಿದ ಹಿಟ್ಟನ್ನು ನೀರಿನಲ್ಲಿ ಕೈ ಅದ್ಧಿ ಮದ್ಯದಲ್ಲಿ ರಂದ್ರ ಮಾಡಿ ಎಣ್ಣೆಯಲ್ಲಿ ಗೋಲ್ಡನ್ ಕಲರ್ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ. ಈಗ ರುಚಿ ಗರಿಯಾದ ಉದ್ದಿನ ವದ ready
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ