ರುಚಿಯಾದ ಘಮ್ ಎನ್ನುವ ಹುರುಳಿ ಸಾರು/how to make huruli saaru/rasam/


ಬೇಕಾಗುವ ಸಾಮಗ್ರಿಗಳು

ಹುರುಳಿ-೧ ಕಪ್

ಕಾಯಿ ಮೆಣಸು-೩-೪

ಹುಣಿಸೆ ಹುಳಿ-ನಿಂಬೆ ಗಾತ್ರದಷ್ಟು

ಕೊತ್ತಂಬರಿ ಸೊಪ್ಪು-ಸ್ವಲ್ಪ

ಉಪ್ಪು-ರುಚಿಗೆ

ಇಂಗು-ಸ್ವಲ್ಪ

ಸಾರಿನ ಹುಡಿ-೨ ಸ್ಪೂನ್

ಒಗ್ಗರಣೆಗೆ

ಎಣ್ಣೆ-೪-೫ spoon

ಸಾಸಿವೆ-ಸ್ವಲ್ಪ

ಉದ್ದಿನ ಬೇಳೆ-ಸ್ವಲ್ಪ

ಬೇವಿನ ಸೊಪ್ಪು-೨-೩ ಎಸಳು 

ಬೆಳ್ಳುಳ್ಳಿ-೬-೭


ಮಾಡುವ ವಿಧಾನ

ಹುರುಳಿ ಚೆನ್ನಾಗಿ ತೊಳೆದು ಕುಕ್ಕರ್ ನಲ್ಲಿ ನೀರು ಹಾಕಿ ೪-೫ ವಿಶೇಲ್ ಬೇಯಿಸಿದ ನಂತರ ಅದರ ನೀರು ಸೋಸಿ ಬೇಯಿಸಿದ ಹುರುಳಿಯನ್ನು  ಮಿಕ್ಸಿಯಲ್ಲಿ ಸ್ವಲ್ಪ ಪೇಸ್ಟ್ ಮಾಡಿ. ನಂತರ ಅದನ್ನು ಪಾತ್ರೆಗೆ ಹಾಕಿ ಹುರುಳಿ ನೀರನ್ನು ಹಾಕಿ ಪಾತ್ರೆಯಲ್ಲಿ ಬೇಯಿಸಿ ಅದಕ್ಕೆ ಉದ್ದನೆ ಹೆಚ್ಚಿದ ಹಸಿರು ಮೆಣಸು, ಹುಣಿಸೆ ಹುಳಿ  ಹಾಕಿ ಚೆನ್ನಾಗಿ ಕುಧಿಸಿ, ಬೇರೆ ತವಾದಲ್ಲಿ ಒಗ್ಗರೆಣೆಗೆ ೩-೪ ಸ್ಪೂನ್ ಎಣ್ಣೆ ಸಾಸಿವೆ,ಉದ್ದಿನ ಬೇಳೆ,ಬೇವಿನ ಸೊಪ್ಪು, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿದ ಒಗ್ಗರೆಣೆಯನ್ನು ಕುದಿಯುವ ಸಾರಿಗೆ ಹಾಕಿ,ನಂತ್ರ ಇಂಗು, ಸಾರಿನ ಹುಡಿ ಹಾಕಿ ಕುದಿಸಿ. ಕೊನೆಗೆ ಕೊತ್ತಂಬರಿಸೊಪ್ಪು ರುಚಿಗೆ ಉಪ್ಪು  ಹಾಕಿ್ದಾರೆ ಘಮ್ ಎನ್ನುವ ಹುರುಳಿ ಸಾರು/ರಸಂ ರೆಡಿ ಟು ಟೇಸ್ಟ್ 


ಕಾಮೆಂಟ್‌ಗಳು