ಪತ್ರೊಡೆ ರೆಸಿಪಿ/how to make patrode?


ಬೇಕಾಗುವ ಸಾಮಗ್ರಿಗಳು

ಬೆಳ್ತಿಗೆ ಅಕ್ಕಿ-3-4 ಕಪ್ 

ಕೆಸುವಿನ ಎಲೆ- 20-30

ತೆಂಗಿನ ತುರಿ-1 ಕಪ್

ಕೊತ್ತಂಬರಿ ಬೀಜ-೩ ಚಮಚ

ಕೆಂಪು ಮೆಣಸು-10-12

ಜೀರಿಗೆ-2 ಚಮಚ

ಹುಣಿಸೆ ಹುಳಿ-ದೊಡ್ಡ ನಿಂಬೆ ಗಾತ್ರದಷ್ಟು

ಈರುಳ್ಳಿ-1

ಹರಸಿನ-ಸ್ವಲ್ಪ

ಉಪ್ಪು ರುಚಿಗೆ 


ಮಾಡುವ ವಿಧಾನ 

ಬೆಲ್ತಿಗೆ ಅಕ್ಕಿ ನೀರಿನಲ್ಲಿ ಚೆನ್ನಾಗಿ ತೊಳೆದು 1 ಗಂಟೆಗಳ ಕಾಲ ನೆನಿಸಿ.ಮಿಕ್ಸ್ ಜಾರ್ ಗೆ ನೆನಿಸಿದ ಅಕ್ಕಿ,ತೆಂಗಿನ ತುರಿ, ಕೊತ್ತಂಬರಿ ಬೀಜ,ಜೀರಿಗೆ,ಹರಷಿಣ,ಕೆಂಪು ಮೆಣಸು,ಈರುಳ್ಳಿ,ರುಚಿಗೆ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿ, ನಂತರ ಕೆಸುವಿನ ಎಲೆ ತೆಗೆದುಕೊಂಡು  ಒಂದರ ಮೇಲೆ ಒಂದು ಇಟ್ಟು ರುಬ್ಬಿದ ಮಿಶ್ರಣವನ್ನು ಹಚ್ಚಿ ಮಡಚಿ ಹಬೆಯಲ್ಲಿ ಬೇಯಲು ಇಡೀ.ಈಗ ರುಚಿಯಾದ ಪತ್ರೊಡೆ ಸವಿಯಲು ರೆಡಿ.


ಕಾಮೆಂಟ್‌ಗಳು