ಬೇಕಾಗುವ ಸಾಮಗ್ರಿಗಳು
ಬೆಂದ ಕಡಲೆ ಬೀಜ- ೧ ಕಪ್
ಸೌತೆ ಕಾಯಿ- ೧ ಸಣ್ಣ ತುಂಡು
ಹಸಿಮೆಣಸು-೧
ಟೊಮೇಟೊ-೧
ಈರುಳ್ಳಿ-೧
ಕ್ಯಾರಟ್-೧
ಕೊತ್ತಂಬರಿ ಸೊಪ್ಪು-ಸ್ವಲ್ಪ
ನಿಂಬೆ ರಸ-ಸ್ವಲ್ಪ
ಉಪ್ಪು-ರುಚಿಗೆ
ಒಂದು ಬೌಲ್ ಗೆ ಉಪ್ಪು ಹಾಕಿ ಬೇಯಿಸಿದ ಕಡಲೆ ಬೀಜ,ಸಣ್ಣಗೆ ಹೆಚ್ಚಿದ ಹಸಿ ಮೆಣಸು,ಸಣ್ಣಗೆ ಹೆಚ್ಚಿದ ಟೊಮೇಟೊ ಈರುಳ್ಳಿ, ತುರಿದ ಕ್ಯಾರಟ್, ಹೆಚ್ಚಿದ ಸೌತೆ ಕಾಯಿ,ರುಚಿಗೆ ಉಪ್ಪು,ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಕಡಲೆ ಚಾಟ್ ರೆಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ