ಗುಜ್ಜೆ ಗಸಿ/ಗುಜ್ಜೆ ಬೆಂಧಿ/Raw jackfruit curry


ಬೇಕಾಗುವ ಸಾಮಗ್ರಿಗಳು 

ಗುಜ್ಜೆ/ಹಲಸಿನ ಕಾಯಿ-೧/೨ ತುಂಡು 

ಬಟಾಣಿ-೧ ಕಪ್ (೮ ಗಂಟೆ ನೆನೆಸಿ)

ಅರಿಶಿನ-೧/೨ ಸ್ಪೂನ್

ಹುಳಿ-ಸ್ವಲ್ಪ

ಬೆಲ್ಲ-ಸ್ವಲ್ಪ

ರುಚಿಗೆ-ಉಪ್ಪು

ಮಸಾಲೆಗೆ

ಕೆಂಪು ಮೆಣಸು-೬-೭ spoon

ಕೊತ್ತಂಬರಿ ಬೀಜ-೫-೬ spoon

ಜೀರಿಗೆ-೪-೫ ಸ್ಪೂನ್

ಕರಿಬೇವು-೨-೩ ಎಸಳು

ತೆಂಗಿನ ತೂರಿ-೧ ಕಪ್

ತೆಂಗಿನ ಎಣ್ಣೆ-೪-೫ ಸ್ಪೂನ್

ಅಡುಗೆ ಎಣ್ಣೆ-೪-೫ ಸ್ಪೂನ್

ಒಗ್ಗರೆಣೆಗೆ-ಸಾಸಿವೆ, ಮೆಣಸು,ಕರಿಬೇವು


ಮಾಡುವ ವಿಧಾನ

ಮೊದಲು ಅರ್ಧ ತುಂಡು ಹಲಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಮಾಡಿ ಕುಕ್ಕರ್ನಲ್ಲಿ ಮುಳುಗುವರೆಗೂ ನೀರು ಹಾಕಿ,ಅದಕ್ಕೆ ಬಟಾಣಿ,  harashina,ಹುಳಿ, ಬೆಲ್ಲ ಹಾಕಿ ೧ -೨ ವಿಶೇಲ್ ಬೇಯಿಸಿ. ಮಸಾಲೆ ಗೆ ಬಾಣಲೆಯಲ್ಲಿ ೪-೫ ಸ್ಪೂನ್ ಅಡುಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಅದಕ್ಕೆ ಕೆಂಪು ಮೆಣಸು,ಕೊತ್ತಂಬರಿ,ಜೀರಿಗೆ,ಕರಿಬೇವು ಹಾಕಿ ಫ್ರೈ ಮಾಡಿ. ನಂತರ ಮಿಕ್ಸಿ ಜಾರ್ ಗೆ ೧ ಕಪ್ ತೆಂಗಿನ ತುರಿ, ಫ್ರೈ ಮಾಡಿದ ಮಸಾಲೆ ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ಮಸಾಲೆಯನ್ನು ಬೇಯಿಸಿದ ಹಲಸಿನ ಕಾಯಿ ಮಿಶ್ರಣಕ್ಕೆ ಹಾಕಿ ಕುಧಿ ಬರುವವರೆಗೂ ಬೇಯಿಸಿ ರುಚಿಗೆ ಉಪ್ಪು ಹಾಕಿ ಒಗ್ಗರೆಣೆ ಕೊಟ್ಟರೆ ರುಚಿಯಾದ ಹಲಸಿನ/ಗುಜ್ಜೆ ಗಸಿ ರೆಡಿ ಟು ಟೇಸ್ಟ್ 


ಕಾಮೆಂಟ್‌ಗಳು