ಬಾಳೆಕಾಯಿ ಬಟಾಣಿ ಸುಕ್ಕ/ಪಲ್ಯ/Raw banana suka/raw banana fry


ಬೇಕಾಗುವ ಸಾಮಗ್ರಿಗಳು 

ಬಾಳೆಕಾಯಿ- ೧೦-೨೦

ಬಟಾಣಿ-೧/೨ ಕಪ್(೫-೬ ಗಂಟೆ ನೆನಿಸಿಡಿ)

ಮಸಾಲೆಗೆ-

ತೆಂಗಿನ ತುರಿ-೧ ಕಪ್

ಕೊತ್ತಂಬರಿ ಬೀಜ-೨-೩ ಚಮಚ

ಜೀರಿಗೆ-೧ ಚಮಚ

ಕೆಂಪು ಮೆಣಸು-೧-೨ 

ನೀರು-ಸ್ವಲ್ಪ

ಒಗ್ಗರೆಣೆಗೆ-

ಅಡುಗೆ ಎಣ್ಣೆ-೪-೫ ಚಮಚ

ಸಾಸಿವೆ-೨ ಚಮಚ

ಉದ್ದಿನ ಬೇಳೆ-೨ ಚಮಚ

ಕಾಯಿಮೆಣಸು-೧-೨

ಈರುಳ್ಳಿ-೨

ಟೊಮೇಟೊ-೨

ಕೊನೆಗೆ-

ಉಪ್ಪು ರುಚಿಗೆ

ಕೊತ್ತಂಬರಿ ಸೊಪ್ಪು-ಸ್ವಲ್ಪ.


ಮಾಡುವ ವಿಧಾನ-ಬಾಳೆಕಾಯಿ ಸಿಪ್ಪೆ ತೆಗೆದು ಹೆಚ್ಚಿ,ಬಟಾಣಿ,ನೀರು ಹಾಕಿ ಕುಕ್ಕರ್ನಲ್ಲಿ ೨ ವಿಶೇಲ್ ಬೇಯಿಸಿ ನೀರು ತೆಗೆದು ಇಡಿ. ನಂತರ ಮಸಾಲೆಗೆ ತೆಂಗಿನ ತುರಿ,ಕೆಂಪು ಮೆಣಸು,ಕೊತ್ತಂಬರಿ ಬೀಜ,ಜೀರಿಗೆ,ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿ.ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆಗೆ ಸಾಸಿವೆ, ಉದ್ದಿನ ಬೇಳೆ,ಹಾಕಿ ಚಿಟ ಪಟ ಆಗುವವರೆಗೂ ಫ್ರೈ ಮಾಡಿದ ನಂತರ ಕಾಯಿಮೆಣಸು,ಈರುಳ್ಳಿ,ಟೊಮೇಟೊ, ಹಾಕಿ ಫ್ರೈ ಮಾಡಿ,ನಂತರ ರುಬ್ಬಿದ ಮಸಾಲೆ ಸ್ವಲ್ಪ ನೀರು ಹಾಕಿ ಬೇಯಿಸಿ, ನಂತರ ಬೇಯಿಸಿದ ಬಾಳೆಕಾಯಿ,ಬಟಾಣಿ ಹಾಕಿ ಫ್ರೈ ಮಾಡಿ.ರುಚಿಗೆ ಉಪ್ಪು,ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿದರೇ ಬಾಳೆಕಾಯಿ ಸುಕ್ಕ ರೆಡಿ.



ಕಾಮೆಂಟ್‌ಗಳು