ಬೇಕಾಗುವ ಸಾಮಗ್ರಿಗಳು
ಎಳೆ ಹಲಸಿನ ಕಾಯಿ-1/2 ತುಂಡು
ಮೈದಾ-1 ಕಪ್
ಕಾರ್ನ್ ಫ್ಲೋರ್- 1/2 ಕಪ್
ಉಪ್ಪು-ರುಚಿಗೆ
ಶುಂಠಿ ಪೇಸ್ಟ್
ಬೆಳ್ಳುಳ್ಳಿ-6-7ಸಣ್ಣಗೆ ಹಚ್ಚಿ
ಈರುಳ್ಳಿ-1-2
ಟೊಮೇಟೊ-2
ಸಕ್ಕರೆ-1 ಸ್ಪೂನ್
ಕೆಂಪು ಮೆಣಸಿನ ಹುಡಿ-2 ಸ್ಪೂನ್
ಸೋಯಾ ಸಾಸ್-1 1/2 ಸ್ಪೂನ್
ಕರಿಯಲು-ಎಣ್ಣೆ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಸಣ್ಣ ತುಂಡುಗಳಾಗಿ ಹೆಚ್ಚಿದ ಹಲಸಿನ ಕಾಯಿಯನ್ನು ಪಾತ್ರೆಗೆ ಹಾಕಿ ಒಂದು ಕುದಿ ಬರುವವರೆಗೂ ಬೇಯಿಸಿ ತೆಗೆದಿಟ್ಟುಕೊಳ್ಳಿ. ನಂತರ ಪಾತ್ರೆಗೆ ಕಾರ್ನ್ ಫ್ಲೋರ್,ಮೈದಾ,ರುಚಿಗೆ ಉಪ್ಪು,ಶುಂಠಿ ಪೇಸ್ಟ್ ಹಾಕಿ ನೀರು ಹಾಕಿ ಹಿಟ್ಟು ಬೋಂಡಾ ಹಿಟ್ಟಿನ ಹದವಾಗಿ ಕಲೆಸಿ,ಅದಕ್ಕೆ ಹಲಸಿನ ಕಾಯಿ ತುಂಡುಗಳನ್ನು ಹಾಕಿ ಎಣ್ಣೆಯಲ್ಲಿ ಕರೆಯಿರಿ.ನಂತರ ಮಿಕ್ಸಿ ಜಾರ್ ಗೆ ಟೊಮೇಟೊ ಸ್ವಲ್ಪ ನೀರು ಸಕ್ಕರೆ ಹಾಕಿ ಪೇಸ್ಟ್ ಮಾಡಿ. ನಂತರ ಬಾಣಲೆಗೆ ೪-೫ ಸ್ಪೂನ್ ಅಡುಗೆ ಎಣ್ಣೆ,ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಟೊಮೇಟೊ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.ಸ್ವಲ್ಪ ನೀರು ಹಾಕಿ.೧ ಸ್ಪೂನ್ಕಾ ರ್ನ್ ಫ್ಲೋರ್ ನೀರು ಮಿಕ್ಸ್ ಮಾಡಿ ಬಾಣಲೆಗೆ ಹಾಕಿ.ನಂತರ ಕೆಂಪು ಮೆಣಸಿನ ಪುಡಿ,ಸೋಯಾ ಸಾಸ್,ರುಚಿಗೆ ಉಪ್ಪು ಹಾಕಿ ಗ್ರೇವಿ ಆಗುವವರೆಗೂ ಫ್ರೈ ಮಾಡಿ ಅದಕ್ಕೆ ಫ್ರೈ ಮಡಿದ ಹಲಸಿನ ಕಾಯಿ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿ ಕೊನೆಗೆ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಜಾಕ್ ಫ್ರೂಟ್ ಮಂಚೂರಿಯನ್ ರೆಡಿ ಟು ಟೇಸ್ಟ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ