ಬೇಕಾಗುವ ಸಾಮಗ್ರಿಗಳು
ಬಾಸುಮತಿ ಅಕ್ಕಿ-೨ ಕಪ್
ತುಪ್ಪ-೪ ಸ್ಪೂನ್
ಬಟಾಣಿ-೧/೨ ಕಪ್
ಪಲಾವ್ ಎಲೆ,ಚೆಕ್ಕೆ,ಲವಂಗ,ಏಲಕ್ಕಿ,ಮೊಗ್ಗು-೨-೩ ನೀರಿನಲ್ಲಿ ನೆನೆಸಿಡಿ
ರುಚಿಗೆ ಉಪ್ಪು
ಬೆಳ್ಳುಳ್ಳಿ ಶುಂಠಿ ಪೇಸ್ಟ್
ಹಸಿಮೆಣಸು-೨-೩
ಗೋಡಂಬಿ-೧೦-೧೨
ಕೊತ್ತಂಬರಿ ಸೊಪ್ಪು-ಸ್ವಲ್ಪ
ಹಾಲು-ಕಾಲು ಕಪ್
ಮಾಡುವ ಕ್ರಮ-
ಬಾಣಲೆಗೆ ೩-೪ ಸ್ಪೂನ್ ತುಪ್ಪ ಹಾಕಿ ಫ್ರೈ ಆಗುವಾಗ ನೆನೆಸಿದ ಚೆಕ್ಕೆ,ಲವಂಗ,ಮೊಗ್ಗು,ಪುಲಾವ್ ಎಲೆ,ಏಲಕ್ಕಿ ಹಾಕಿ ಸ್ವಲ್ಪ ಫ್ರೈ ಮಾಡಿ,ಉದ್ದನೆ ಹೆಚ್ಚಿದ ಹಸಿರು ಮೆಣಸು,ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.ಗೋಡಂಬಿ ಹಾಕಿ ಫ್ರೈ ಮಾಡಿ ಸ್ವಲ್ಪ ಹಾಲು ಹಾಕಿ ಫ್ರೈ ಮಾಡಿ ಕೊತ್ತಂಬರಿ ಸೊಪ್ಪು ರುಚಿಗೆ ಉಪ್ಪು ಹಾಕಿ ಫ್ರೈ ಬೇಯಿಸಿಧ ಬಟಾಣಿ ಹಾಕಿ ಫ್ರೈ ಮಾಡಿ ಕೊನೆಗೆ ಬಾಸುಮತಿ ಅಕ್ಕಿ ೨ ಕಪ್ ಬಾಣಲೆಗೆ ಹಾಕಿ ೪೧/೨ ನೀರು ಹಾಕಿ ಧಮ್ ರೀತಿ ಬೇಯಿಸಿದರೆ ರುಚಿಯಾದ ghee ರೈಸ್ ರೆಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ